ಸ್ಯಾಂಡಲ್’ವುಡ್’ನ ರಿಚೆಸ್ಟ್ ಸ್ಟಾರ್ ಯಾರ್ ಗೊತ್ತಾ..? ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..?
ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ ಅಂದರೆ 2018 ರಲ್ಲಿ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ… 2018 ರಲ್ಲಿ ಸುಮಾರು 220 ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡಿವೆ… ಆದರೆ ಇದರಲ್ಲಿ ಗೆಲುವು ಕಂಡಿದ್ದು ಮಾತ್ರ 40 % ಕ್ಕೂ ಹೆಚ್ಚು ಚಿತ್ರಗಳು ಮಾತ್ರ..ಯಾವ ಕನ್ನಡ ನಟ ಎಷ್ಟು ಸಂಭಾವನೆ ಪಡೆದಿದ್ದಾರೆ.. ಯಾರು ಈ ಸಾಲಿನ ಟಾಪ್ ನಟ…ಅತೀ ಹೆಚ್ಚು ಸಂಭಾವನೆ ಪಡೆಯಿರುವ ನಟ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ…
ಅಂದಹಾಗೆ ಈ ವರ್ಷ ಅತೀ ಹೆಚ್ಚು ಗಳಿಕೆಯ ಚಿತ್ರ ಎಂದರೆ ಅದು ನಮ್ಮ ರಾಕಿಂಗ್ ಸ್ಟಾರ್ ಯಶ್.. ಅವರ ಕೆ.ಜಿ.ಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ 12 ಕೋಟಿ.. ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಸಿನಿಮಾ ಕೂಡ ಬರಲಿಲ್ಲ ಆದರೂ ದರ್ಶನ್ ಅವರ ಹವಾ ಮಾತ್ರ ಕಡಿಮೆ ಆಗಿಲ್ಲ... ದರ್ಶನ್ ಅವರು ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರಕ್ಕೆ ಪಡೆದಿರುವ ಸಂಭಾವನೆ ಬರೋಬ್ಬರಿ 12 ಕೋಟಿ. ಸುಮಾರು 3 ರಿಂದ 4 ವರ್ಷಗಳಿಂದ ದರ್ಶನ್ ಅವರೇ ಕನ್ನಡ ನಟರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಕುರುಕ್ಷೇತ್ರ ಚಿತ್ರ ಈ ವರ್ಷ ಬಿಡುಗಡೆ ಆಗಲಿದೆ. ಈ ವರ್ಷದ ಮತ್ತೊಂದು ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾ ಎಂದರೆ ಅದು ಟಗರು. ಈ ಚಿತ್ರಕ್ಕಾಗಿ ಶಿವರಾಜ್ ಕುಮಾರ್ ಬರೋಬ್ಬರಿ 8 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ. ಟಗರು ಚಿತ್ರವನ್ನು. ಈ ಟಗರು ಸಿನಿಮಾ ಗಳಿಕೆಯಲ್ಲಿ ದಿ ವಿಲನ್ ಚಿತ್ರವನ್ನು ಹಿಂದಿಕ್ಕಿದೆ ಎನ್ನಲಾಗಿದ್ದು, ಟಗರು ಚಿತ್ರ ಬರೋಬ್ಬರಿ 45 ಕೋಟಿ ಗಲ್ಲಾ ಪೆಟ್ಟಿಗೆಯನ್ನು ಸೇರಿದೆ.2018 ಸಾಲಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಎಂದರೆ ಅದು ದಿ ವಿಲನ್. ದಿ ವಿಲನ್ ಚಿತ್ರಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರೋಬ್ಬರಿ 8 ಕೋಟಿ ಸಂಭಾವನೆ ಪಡೆದಿದ್ದಾರೆ.. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ತಮ್ಮ ನಟಸಾರ್ವಭೌಮ ಚಿತ್ರಕ್ಕಾಗಿ ಬರೋಬ್ಬರಿ 8 ಕೋಟಿಯ ಸಂಭಾವನೆ ಪಡೆದಿದ್ದಾರೆ. ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಆರೆಂಜ್ ಚಿತ್ರಕ್ಕಾಗಿ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆದಿದ್ದಾರೆ.
Comments