ನಕಲಿ ಖಾತೆದಾರರ ಹಾವಳಿಗೆ ಅಂಬಿ ಕುಟುಂಬವೇ ಟಾರ್ಗೆಟ್ : ಸುಮಲತಾ ವಾರ್ನಿಂಗ್...!!!

ಇತ್ತೀಚೆಗೆ ಸಿನಿಮಾ ಸ್ಟಾರ್ ಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುತ್ತಿವೆ. ಟ್ವಿಟ್ಟರ್, ಫೇಸ್ ಬುಕ್ ಮೂಲಕ ಸೆಲೆಬ್ರಿಟಿಗಳ ಹೆಸರನ್ನು ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸುವವರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ಇಂದು ಸೋಶಿಯಲ್ ಮಿಡಿಯಾನೇ ಪ್ರಪಂಚ. ಹೇಳಿ-ಕೇಳಿ ಸಾಮಾಜಿಕ ಜಾಲತಾಣಗಳದ್ದೇ ಸದ್ದು. ಇಂತಹ ಸಂದರ್ಭದಲ್ಲಿ ಯಾರು ಯಾರ ಖಾತೆ ಬೇಕಾದ್ರು ತೆಗೆಯಬಹುದು, ಯಾರು ಯಾರ ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಸದ್ಯ ನಕಲಿ ಖಾತೆದಾರರ ಹಾವಳಿಗೆ ನಟಿ ಸುಮಲತಾ ಅಂಬರೀಶ್ ಕೂಡ ಸಿಕ್ಕಿ ಹಾಕಿಕೊಂಡಿದ್ದಾರೆ.
ಅಂದಹಾಗೇ ಈ ಹಿಂದೆ ತಮ್ಮ ಪುತ್ರ ಅಭಿಷೇಕ್ ಅಂಬರೀಶ್ ಹೆಸರನಲ್ಲಿ ಖಾತೆ ತೆರೆದಿದ್ದವರಿಗೆ ಸುಮಲತಾ ಎಚ್ಚರಿಕೆ ನೀಡಿದ್ದರು. ಇದೀಗ ತಮ್ಮದೇ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳು ಸೃಷ್ಟಿಯಾಗಿದ್ದು, ಇದರಿಂದ ಬರುವ ರಿಕ್ವೆಸ್ಟ್, ಮೆಸೇಜ್ ಗಳನ್ನು ಮಾನ್ಯ ಮಾಡಬೇಡಿ ಎಂದಿದ್ದಾರೆ. ಇಂತಹ ಹಲವು ಖಾತೆಗಳು ನನ್ನ ಗಮನಕ್ಕೆ ಬಂದಿವೆ. ಆದರೆ ನನಗಿರುವುದು ಒಂದೇ ಒಂದು ಫೇಸ್ ಬುಕ್ ಖಾತೆ ಎಂದಿದ್ದಾರೆ. ಅದ್ಯಾಕೋ ನಮ್ಮನ್ನೇ ಟಾರ್ಗೆಟ್ ಮಾಡಿ ನಕಲಿ ಖಾತೆ ಸೃಷ್ಟಿಸಿದ್ದಾರೆ. ಆದರೆ ಆ ಖಾತೆ ನಮ್ಮದಲ್ಲ. ನಾವು ಯಾವ ಖಾತೆಯನ್ನುಕೂಡ ತೆಗೆದಿಲ್ಲ. ಅದರಿಂದ ಬರುವ ಪೋಸ್ಟ್’ಗಳಾಗಲೀ, ಮೆಸೇಜ್ ಆಗಲೀ ಗಣನೆಗೆ ತೆಗೆದುಕೊಳ್ಳ ಬೇಡಿ.
Comments