ಎ ಹರ್ಷ ನಿರ್ದೇಶನದ ‘ಸೀತಾರಾಮ ಕಲ್ಯಾಣ’ ಸಿನಿಮಾದಲ್ಲೊಬ್ಬ ಸ್ಟಾರ್ ಹುಟ್ತಾನಾ..?
ಸ್ಯಾಂಡಲ್ ವುಡ್’ ನಲ್ಲಿ ಇತ್ತಿಚಿಗೆ ಒಳ್ಳೊಳ್ಳೆ ಸಿನಿಮಾದ ಮೂಲಕ ಭರವಸೆಯ ನಾಯಕರು ಉಳಿದುಕೊಳ್ಳುತ್ತಿದ್ದಾರೆ.. ಆದರೆ ಅದೆಷ್ಟೋ ನಾಯಕರಿಗೆ ಸಿನಿಮಾಗಳು ಕೈ ಕೊಟ್ಟಿವೆ… ಆದರೆ ಇದೀಗ ಇಂಥಾದ್ದೊಂದು ಪ್ರಶ್ನೆ ಗಾಂಧಿನಗರದ ಜೊತೆಗೆ ಬಹುತೇಕರಲ್ಲಿದೆ. ನಿಖಿಲ್ ಮೊದಲ ಚಿತ್ರ ಜಾಗ್ವಾರ್ ಸಮಯದಲ್ಲಿಯೇ ಅನೇಕರು ಸ್ಟಾರ್ ಈಸ್ ಬಾರ್ನ್ ಅಂತ ನಿರ್ಧರಿಸಿದ್ದರು.. ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಹೆಸರನ್ನು ಮಾಡಿದ್ದರು.. ಎರಡನೇ ಚಿತ್ರ ಸೀತಾರಾಮ ಕಲ್ಯಾಣದ ಮೂಲಕ ನಿಖಿಲ್ ಸ್ಟಾರ್ ನಟನಾಗಿ ಸ್ಯಾಂಡಲ್ ವುಡ್ ನಲ್ಲಿ ಭದ್ರವಾಗಿ ನೆಲೆ ನಿಲ್ಲೋ ಎಲ್ಲ ಲಕ್ಷಣಗಳೂ ಕಾಣಿಸ್ತಿವೆ ಎಂಬುದು ಸಿನಿರಸಿಕರ ಮಾತಾಗಿದೆ..
ಈ ರೀತಿಯ ಭರವಸೆ ಹುಟ್ಟೋದಕ್ಕೆ ಕಾರಣ ಆಗಿರೋದು ನಿರ್ದೇಶಕ ಎ ಹರ್ಷ… ಅವರ ಸಿನಿಮಾಗಳು ಯಾವಾಗಲೂ ವಿಭಿನ್ನವಾಗಿಯೇ ಕೂಡಿರುತ್ತವೆ,, ಸಿನಿಮಾ ಧ್ಯಾನ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿದ್ದ ಹರ್ಷ ನಿರ್ದೇಶಕರಾದ ನಂತರ ಹಲವಾರು ಸ್ಟಾರ್ ನಟರ ಸಿನಿಮಾಗಳ ಸಾರಥ್ಯ ವಹಿಸಿಕೊಂಡು ಸಿನಿ ರಂಗದಲ್ಲಿ ಸೈ ಎನಿಸಿಕೊಂಡರು.... ಯಾವ ನಟರನ್ನು ಎಂಥಾ ಪಾತ್ರದಲ್ಲಿ ಪ್ರೇಕ್ಷಕರು ನೋಡೋಕೆ ಇಷ್ಟ ಪಡ್ತಾರೆ? ಪ್ರೇಕ್ಷಕರ ನಿರೀಕ್ಷೆಗಳೇನು… ಇಂಥಾ ವಿಚಾರಗಳನ್ನೆಲ್ಲ ಅರ್ಥ ಮಾಡಿಕೊಂಡೇ ಫಿಲ್ಡಿಗೆ ಇಳಿಯೋದು ನಿರ್ದೇಶಕ ಹರ್ಷ ಅವರ ಸ್ಪೆಷಾಲಿಟಿ. ಮೊದಲ ಚಿತ್ರದಲ್ಲಿಯೇ ಮೆಚ್ಚುಗೆ ಗಳಿಸಿದ್ದ ನಿಖಿಲ್ ಅವರನ್ನ ಸ್ಟಾರ್ ಆಗಿ ಮಿನುಗುವಂತೆ ಮಾಡೋದು ಹರ್ಷ ಪಾಲಿಗೆ ಅಸಾಧ್ಯವೇನಲ್ಲ ಎನ್ನಬಹುದು. ದೊಡ್ಡ ಕನಸಿನೊಂದಿಗೆ ಹರ್ಷ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ..ಪೈನಲಿ. ಸೀತಾರಾಮ ಕಲ್ಯಾಣ ಸಿನಿಮಾದಿಂದ ಮತ್ತೊಬ್ಬ ಸ್ಟಾರ್ ಹುಟ್ತಾನಾ ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ…
Comments