ಲಕ್ಷ ಲಕ್ಷ ಕೊಡ್ತಾರೆ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂದು ಕನ್ನಡದ ಖ್ಯಾತ ನಟಿಗೆ ಕೇಳಿದ್ದು ಯಾರು ಗೊತ್ತಾ..?

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ… ಕೆಲವರು ಅದನ್ನು ಒಳ್ಳೆಯದಕ್ಕೆ ಬಳಸಿಕೊಂಡರೆ ಮತ್ತೆ ಕೆಲವರು ಅದನ್ನು ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ… ಸೋಷಿಯಲ್ ಮೀಡಿಯಾ ದೊಡ್ಡ ಪ್ರಮಾಣದ ವೇದಿಕೆಗಳಾಗಿ ಇತ್ತಿಚಿಗೆ ನಿರ್ಮಾಣ ಆಗುತ್ತಿದ್ದರೂ ,ನಟಿಯರಿಗೆ ನೇರವಾಗಿ ಮೆಸೇಜ್ ಮಾಡಿ ಅಡ್ಜಸ್ಟ್ ಮಾಡಿಕೊಳ್ಳಿ ಎನ್ನುವ ಮಟ್ಟಿಗೆ ನಮ್ಮ ಚಿತ್ರರಂಗಗಳು ಬೆಳೆದು ನಿಂತಿವೆ, ಅಡ್ಜಸ್ಟ್ ಮಾಡಿಕೊಂಡರೆ ಇಷ್ಟು ಹಣ ಕೊಡ್ತಾರೆ ನಿರ್ಮಾಪಕರು ಎಂದು ಕೇಳುವ ಹಂತಕ್ಕೆ ಹೋಗಿದ್ದಾರೆ ಚಿತ್ರರಂಗದ ಕೆಲ ಜನರು…
ರಾಗಿಣಿ ಐಪಿಎಸ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಹೆಚ್ಚಾಗಿ ಕನ್ನಡದಲ್ಲೇ ನಟಿಸುತ್ತಿರುವ ನಟಿ ಕವಿತಾ ರಾಧೇಶ್ಯಾಮ್,ಅವರಿಗೆ ಮೆಸೇಜ್ ಮಾಡಿದ ತಮಿಳು ಖ್ಯಾತ ನಿರ್ದೇಶಕ ಗೌತಮ್ ಶಂಕರ್,ನಿರ್ಮಾಪಕರು ಸಿನ್ ಗೆ ಲಕ್ಷ ಲಕ್ಷ ಕೊಡ್ತಾರೆ,ಅಡ್ಜೆಸ್ಟ್ ಮಾಡಿಕೊಂಡರೆ 8ಲಕ್ಷ ಕೊಡ್ತಾರೆ ಎಂದು ಹೇಳಿದ್ದಾರೆ.ಇದರಿಂದ ರೊಚ್ಚಿಗೆದ್ದ ನಟಿ ಕವಿತಾ ಅವರು ಮಾಡಿರುವ ಮೆಸೇಜ್ ನ್ನ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮಿಡಿಯದಲ್ಲಿ ಷೇರ್ ಮಾಡಿದ್ದಾರೆ..ಇತ್ತಿಚಿಗೆ ಚಿತ್ರರಂಗದಲ್ಲಿ ಮೀಟೂ ಪ್ರಕರಣಗಳು ಕೇಳಿಬಂದವು.. ಅದ್ಯಾಕೋ ಅದು ಕೂಡ ಸುಮ್ನೆ ಸದ್ದಿಲ್ಲದಂತೆ ಆಗೋಗಿದೆ.. ಒಟ್ಟಾರೆಯಾಗಿ ಬಣ್ಣದ ಲೋಕದಲ್ಲಿ ಹುಡುಗಿಯರು ಪಳಗೋದು ಸ್ವಲ್ಪ ಕಷ್ಟವೇ ಸರಿ.
Comments