ಕನ್ನಡದ ಹುಡುಗಿ ಜೊತೆ ಸಪ್ತಪದಿ ತುಳಿಯಲಿರುವ ತಮಿಳಿನ ಸ್ಟಾರ್

17 Jan 2019 6:00 PM | Entertainment
352 Report

ತಮಿಳಿನ ಸ್ಟಾರ್ ವಿಶಾಲ್  ಅಲಿಯಾಸ್ ವಿಶಾಲ್ ರೆಡ್ಡಿಗೂ ಬೆಂಗಳೂರಿಗೆ ಒಂದು ರೀತಿಯ ಸಂಬಂಧ . ಅಂದಹಾಗೇ ಸ್ಯಾಂಡಲ್ವುಡ್ ಸ್ಟಾರ್ ಗಳಿಗೂ ವಿಶಾಲ್’ಗೂ ಬಹಳ ಆತ್ಮೀಯತೆ. ಟಾಲಿವುಡ್ ನ ಸ್ಟಾರ್ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿಗಳಾಗಲಿದ್ದಾರೆ. ಈ ವಿಷಯವನ್ನು ಸ್ವತಃ  ವಿಶಾಲ್ ಕೂಡ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ನಟಿಯೊಬ್ಬರ ಡೇಟಿಂಗ್ ವಿಚಾರದಲ್ಲಿ ಪೇಚಿಗೆ ಸಿಲುಕಿಕೊಂಡಿದ್ದ ವಿಶಾಲ್ ಅಧಿಕೃತವಾಗಿ ನಾನು ಅನಿಶಾಳನ್ನು ವರಿಸುತ್ತಿದ್ದೇ ಎಂದಿದ್ದಾರೆ. ಅಂದಹಾಗೇ ಅನಿಶಾ ಕೂಡ ಕಲಾವಿದೆಯಾಗಿದ್ದೂ ಈಗಾಗಲೇ ವಿಜಯ್ ದೇವರಕೊಂಡ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.ಪೆಲ್ಲಿಚೊಪ್ಪುಲು ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳಲ್ಲಿ ಅನಿಶಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.ನಟ ವಿಶಾಲ್ ವರಲಕ್ಷ್ಮಿ ಶರತ್ ಕುಮಾರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಆದರೆ ಅದು ಸುಳ್ಳು ವದಂತಿ ಎಂದು ಇಬ್ಬರೂ ಖಚಿತಪಡಿಸಿದ್ದರು. ಹೈದರಾಬಾದಿನ ಉದ್ಯಮಿಯ ಪುತ್ರಿಯನ್ನು ತಮ್ಮ ಮಗ ಮದುವೆಯಾಗಲಿದ್ದಾರೆ ಎಂದು ವಿಶಾಲ್ ತಂದೆ ಜಿ ಕೆ ರೆಡ್ಡಿ ಈ ಹಿಂದೆ ಹೇಳಿದ್ದರು. ವಿಶಾಲ್ ಕಳೆದ ವರ್ಷ ಇರುಂಬು ತಿರೈ ಮತ್ತು ಸಂದಕೋಜ್ಹಿ 2 ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ರಾಶಿ ಖನ್ನಾ ಜೊತೆ ಅಯೋಗ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರ ಜೂನಿಯರ್ ಎನ್ ಟಿಆರ್ ನಟಿಸಿದ್ದ ಟೆಂಪರ್ ಚಿತ್ರದ ರಿಮೇಕ್ ಆಗಿದೆ.ಯಶ್ ಅಭಿನಯದ ಕೆಜಿಎಫ್ ಚಿತ್ರದ ತಮಿಳು ಅವತರಣಿಕೆಗೆ ವಿಶಾಲ್ ಹಂಚಿಕೆದಾರರಾಗಿದ್ದರು. ಪೆಲ್ಲಿಚೊಪ್ಪುಲು ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳಲ್ಲಿ ಅನಿಶಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ನಟ ವಿಶಾಲ್ ವರಲಕ್ಷ್ಮಿ ಶರತ್ ಕುಮಾರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಆದರೆ ಅದು ಸುಳ್ಳು ವದಂತಿ ಎಂದು ಇಬ್ಬರೂ ಖಚಿತಪಡಿಸಿದ್ದರು. ಹೈದರಾಬಾದಿನ ಉದ್ಯಮಿಯ ಪುತ್ರಿಯನ್ನು ತಮ್ಮ ಮಗ ಮದುವೆಯಾಗಲಿದ್ದಾರೆ ಎಂದು ವಿಶಾಲ್ ತಂದೆ ಜಿ ಕೆ ರೆಡ್ಡಿ ಈ ಹಿಂದೆ ಹೇಳಿದ್ದರು. ಈ ಎಲ್ಲಾ ಗಾಸಿಪ್ ಗಳಿಗೆ ಬ್ರೇಕ್ ಹಾಕಿರುವ ವಿಶಾಲ್ ಮದುವೆಯ ಡೇಟ್ ಕಲೂಡ ಸದ್ಯದಲ್ಲೇ  ಅನೌನ್ಸ್ ಮಾಡಲಿದ್ದಾರೆ.ವಿಶಾಲ್ ಕಳೆದ ವರ್ಷ ಇರುಂಬು ತಿರೈ ಮತ್ತು ಸಂದಕೋಜ್ಹಿ 2 ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ರಾಶಿ ಖನ್ನಾ ಜೊತೆ ಅಯೋಗ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರ ಜೂನಿಯರ್ ಎನ್ ಟಿಆರ್ ನಟಿಸಿದ್ದ ಟೆಂಪರ್ ಚಿತ್ರದ ರಿಮೇಕ್ ಆಗಿದೆ.ಯಶ್ ಅಭಿನಯದ ಕೆಜಿಎಫ್ ಚಿತ್ರದ ತಮಿಳು ಅವತರಣಿಕೆಗೆ ವಿಶಾಲ್ ಹಂಚಿಕೆದಾರರಾಗಿದ್ದರು. ಯಶ್ ಮತ್ತು ವಿಶಾಲ್ ಒಳ್ಳೆ ಸ್ನೇಹಿತರು. ಈ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದೋಸ್ತಿ ಸಂಬಂಧವನ್ನು ಪ್ರಸ್ತಾಪ ಮಾಡಿದ್ದರು.

Edited By

Kavya shree

Reported By

Kavya shree

Comments