ಬಹುಭಾಷೆಯ ಈ ಚಿತ್ರಕ್ಕೆ ನಾಲ್ವರು ನಾಯಕರು: ಕನ್ನಡಕ್ಕೆ ರಾಕಿಂಗ್ ಸ್ಟಾರ್ ..!!

ಸ್ಯಾಂಡಲ್’ವುಡ್ ನಲ್ಲಿ ಇತ್ತಿಚಿಗೆ ಟ್ರೆಂಡ್ ಕ್ರಿಯೆಟ್ ಮಾಡಿದ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಕೂಡ ಒಂದು… ಯಶ್ ಈಗ ಬಹು ಬೇಡಿಕೆಯ ನಟ ಆಗಿರುವುದಂತು ಸುಳ್ಳಲ್ಲ…ಯಶ್ ಪರಭಾಷೆಗಳಿಂದಲೂ ಕೂಡ ಸಿಕ್ಕಾಪಟ್ಟೆ ಆಫರ್ ಬರ್ತಿದೆಯಂತೆ… ಆದರೆ ಸಧ್ಯ ಯಶ್ 'ಚಾಪ್ಟರ್-2' ಸಿನಿಮಾ ಬಗ್ಗೆ ಯೋಚನೆ ಮಾಡ್ತಿರುವ ರಾಕಿ ಭಾಯ್, ಬೇರೆ ಸಿನಿಮಾಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದರು.. ಆದರೆ ಇದೀಗ, ತಮಿಳು ಇಂಡಸ್ಟ್ರಿಯಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಕೆಳಿ ಬರುತ್ತಿದೆ... ತಮಿಳಿನ ಖ್ಯಾತ ಬರಹಗಾರ್ತಿಯಾದ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ರಾವ್ ಅವರ ಕಾದಂಬರಿಯು ಸಿನಿಮವಾಗುತ್ತಿದ್ದು, ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..
ಈ ಸಿನಿಮಾ ನಾಲ್ಕು ಭಾಷೆಯಲ್ಲಿ ಬರಲಿದ್ದು, ನಾಲ್ಕು ಭಾಷೆಯ ದೊಡ್ಡ ನಟರು ಆಯಾ ಆಯಾ ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ತಮಿಳಿನ ಖ್ಯಾತ ಬರಹಗಾರ್ತಿಯಾದ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ರಾವ್ ಬರೆದಿರುವ 'ದಿ ಹೈವೇ ಮಾಫಿಯಾ' ಕಾದಂಬರಿ ಸಿನಿಮಾ ಆಗ್ತಿದ್ದು, ಈ ಚಿತ್ರದ ಕನ್ನಡ ವರ್ಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕರನ್ನಾಗಿಸುವ ತೀರ್ಮಾನಕ್ಕೆ ಬಂದಿದ್ದಾರಂತೆ ಚಿತ್ರತಂಡದವರು. ಉದ್ಯಮಿ ಅರ್ಜುನ್ ಕೃಷ್ಣನ್ ಮತ್ತು ಹೆದ್ದಾರಿಯಲ್ಲಿ ಗೋ ಕಳ್ಳ ಸಾಗಣಿಕೆ ಮಾಡೋರ ವಿರುದ್ಧ ನಡೆಯುವ ಭಯಾನಕ ಕಥೆ ಇದಾಗಿದ್ದು, ಅರ್ಜುನ್ ಕೃಷ್ಣನ್ ಪಾತ್ರಕ್ಕೆ ಯಶ್ ಅವರನ್ನ ಕರೆತರುವ ಪ್ರಯತ್ನಕ್ಕೆ ಮುಂದಾಗಲಿದೆ ಚಿತ್ರತಂಡ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.. ಇನ್ನೂ ತಮಿಳಿನಲ್ಲಿ ವಿಜಯ್, ತೆಲುಗಿನಲ್ಲಿ ಮಹೇಶ್ ಬಾಬು ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ..
Comments