ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.! ಸುದೀಪ್ ಸೂಚಿಸಿದ್ದು ಯಾರನ್ನ ಗೊತ್ತಾ..?
ಸ್ಯಾಂಡಲ್’ವುಡ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಎಂದರೆ ಸಾಕು… ಎಲ್ಲರಿಗೂ ಕೂಡ ಗೌರವ..ಇಂಡಸ್ಟ್ರಿಯಲ್ಲಿ ಒಂಥರಾ ಗತ್ತು,ಗಮ್ಮತ್ತು ಅಂತ ಇದ್ದಿದ್ದು ಅಂದರೆ ಅದು ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಗೆ ಮಾತ್ರ.. ಅಂಬಿ ಅಣ್ಣನ ಮನೆಯೇ ಕನ್ನಡ ಚಿತ್ರರಂಗಕ್ಕೆ ಒಂಥರಾ ಹೆಡ್ ಆಫೀಸ್ ಆಗಿತ್ತು. ಚಿತ್ರರಂಗಕ್ಕೆ, ಕಲಾವಿದರಿಗೆ, ನಿರ್ಮಾಪಕ, ನಿರ್ದೇಶಕ ಹೀಗೆ ಇಂಡಸ್ಟ್ರಿಯಲ್ಲಿ ಯಾರಿಗೆ ಸಮಸ್ಯೆಯಾದರು, ಅಂತಿಮವಾಗಿ ಅಂಬಿ ಮನೆಯಲ್ಲಿಯೇ ಫೈನಲ್ ಆಗುತ್ತಿತ್ತು... ಇದೀಗ, ಅಂಬಿಯ ಸ್ಥಾನದಲ್ಲಿ ಯಾರು ಬರುತ್ತಾರೆ ಎನ್ನುವುದು ಗಾಂಧಿನಗರದ ಮಾತಾಗಿದೆ...
ಈಗಾಗಲೇ ಅಂಬಿ ಜಾಗಕ್ಕೆ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಸುದೀಪ್, ದರ್ಶನ್ ಸೇರಿದಂತೆ ಹಲವರ ಹೆಸರು ಈ ಸ್ಥಾನಕ್ಕೆ ಕೇಳಿಬರುತ್ತಿದ್ದು, ಅಂಬಿಯ ಜಾಗವನ್ನ ಯಾರೂ ತುಂಬಲು ಸಾಧ್ಯವಿಲ್ಲ ಎನ್ನುವುದು ಸ್ವತಃ ಈ ನಟರ ಅಭಿಪ್ರಾಯ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.. ''ಹಾಗೆ ನೋಡುವುದಾದರೆ ನಮ್ಮಲ್ಲಿ ಇನ್ನು ಕೆಲವು ಹಿರಿಯ ನಟರಿದ್ದಾರೆ. ರವಿಚಂದ್ರನ್, ಶಿವರಾಜ್ ಕುಮಾರ್ ಅಂತವರಿದ್ದಾರೆ. ಇವರ ಮಾತಿಗೆ ತೂಕಯಿದೆ. ಇಂಡಸ್ಟ್ರಿ ಇವರ ಮಾತಿಗೆ ಬೆಲೆ ನೀಡುತ್ತೆ. ಅವರಿಬ್ಬರಿಗೆ ಸೀನಿಯರಿಟಿ ಇದೆ'' ಎಂದು ಸುದೀಪ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಇದಕ್ಕೆ ಮನಸ್ಸು ಮಾಡಬೇಕು ಎಂದಿದ್ದಾರೆ.
Comments