ಹುಬ್ಬು ಚೆಲುವೆ ಪ್ರಿಯಾವಾರಿಯರ್ ಮೇಲೆ ಶ್ರೀದೇವಿ ಪತಿಯ ಕೆಂಗಣ್ಣು...!!!
ಅಂದಹಾಗೇ ರಾತ್ರೋ ರಾತ್ರಿ ಕಣ್ಣು ಮಿಟುಕಿಸುವುದರ ಮೂಲಕ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಸಂಕಷ್ಟ ಎದುರಾಗಿದೆ. ಹಿಂದಿ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿರುವ ಪ್ರಿಯಾ ಕೆಲ ಫೋಟೋಶೂಟ್ ಕೂಡ ಮಾಡಿಸಿದ್ದರು. ಒಂದಷ್ಟು ಹಾಸಿಗೆ ಮೇಲೆ, ಮತ್ತೊಂದಿಷ್ಟುಬಾತ್ ಟಬ್ ಮೇಲೆ ಕುಳಿತು ಹಾಟ್ ಫೋಟೋ ಶೂಟ್ ಮಾಡಿಸಿದ್ದ ಪ್ರಿಯಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದೀಗ ಪ್ರಿಯಾ ಹೊಸ ಸಿನಿಮಾದಲ್ಲಿನ ದೃಶ್ಯದ ಒಂದು ಸ್ಟಿಲ್ ಫೋಟೋ ಮತ್ತು ವಿಡಿಯೋದಿಂದ ಖ್ಯಾತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಸಿಟ್ಟಾಗಿದ್ದಾರೆ. ಪ್ರಿಯಾ ಆ ಭಂಗಿಯಲ್ಲಿರುವ ಫೋಟೋ ನೋಡಿ ಬೋನಿ ಕಪೂರ್ ನೊಟೀಸ್ ಕೂಡ ಜಾರಿ ಮಾಡಿದ್ದಾರಂತೆ ಆ ಸಿನಿಮಾ ನಿರ್ದೇಶಕರಿಗೆ.
ಅಷ್ಟಕ್ಕೂ …ಪ್ರಿಯಾ ಮಾಡುತ್ತಿರುವ ಹೊಸ ಚಿತ್ರದ ಹೆಸರು ಶ್ರೀದೇವಿ ಬಂಗ್ಲೋ. ಈ ಚಿತ್ರದಲ್ಲಿ ಪ್ರಿಯಾ ಬಾತ್ ಟಬ್ ನಲ್ಲಿ ಬೀಳುವ ದೃಶ್ಯವಿದೆ. ಈ ಟಬ್ ನಲ್ಲಿ ಇರೊ ದೃಶ್ಯ ಶ್ರೀದೇವಿ ಸಾವಿಗೆ ಹೋಲುತ್ತದೆ. ಸಿನಿಮಾದಿಂದ ಇದನ್ನು ತೆಗೆದುಹಾಕಿ ಎಂದು ಬೋನಿಕಪೂರ್ ನಿರ್ದೇಶಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಆದರೆ ನಿರ್ದೇಶಕ ಪ್ರಶಾಂತ್ ಮಾಂಬುಲಿ ಅವರು ನಾನು ಸಿನಿಮಾದಿಂದ ಏನನ್ನೂ ತೆಗೆದುಹಾಕುವುದಿಲ್ಲ. ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ ಎಂದಿದ್ದಾರೆ. ಇದೀಗ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಈ ಸಿನಿಮಾ ಶ್ರೀದೇವಿಗೆ ಹೋಲುವುದಿಲ್ಲ. ಶ್ರೀದೇವಿ ನನ್ನ ಪಾತ್ರದ ಹೆಸರು. ನನಗೂ ಶ್ರೀದೇವಿಗೂ ಯಾವುದೇ ಸಂಬಂವಿಲ್ಲ ಎಂದಿದ್ದಾರೆ. ಇನ್ನು ನಟಿ ಶ್ರೀದೇವಿ ಸಾವು ಗೌಪ್ಯವಾಗಿಯೇ ಇದೆ. ಅವರ ಸಾವು ಆಕಸ್ಮಿಕವೋ ಅಥವಾ ಕೊಲೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದುಕೊಂಡಿದೆ.
Comments