ಯಶ್ ಮಗಳಿಗೆ ಸಿಕ್ತು ಪುನೀತ್ ರಾಜ್'ಕುಮಾರ್'ರಿಂದ ದುಬಾರಿ ಗಿಫ್ಟ್...!!

ರಾಕಿಂಗ್ ಸ್ಟಾರ್ ಯಶ್ ಸದ್ಯ ಸ್ಯಾಂಡ್’ಲ್’ವುಡ್’ನ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು, ಇತ್ತೀಚೆಗೆ ರಿಲೀಸ್ ಆದ ಅವರ ಕೆಜಿಎಫ್ ಭರ್ಜರಿ ಇನ್ನಿಂಗ್ ಬಾರಿಸುತ್ತಿದೆ. ನಟ ಯಶ್ ಸದ್ಯ ಒಂದು ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಮಗು, ತನ್ನ ಕೈ ಬೆರಳನ್ನು ಬಿಗಿಯಾಗಿ ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮಟ್ಟದ ಸುದ್ದಿಯಾಗಿತ್ತು. ಯಶ್ ಅದನ್ನು ಫೇಸ್ ಬುಕ್ ನಲ್ಲಿ ಹಾಕಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಅಂದಹಾಗೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಯಶ್ ಸಂಬಂಧ ಚೆನ್ನಾಗಿದೆ. ಇವರಿಬ್ಬರ ಆತ್ಮೀಯತೆ ಎಷ್ಟಿದೆ ಅಂದರೆ ಸಿನಿಮಾ ಕೆಲಸಗಳಲ್ಲಿ ಬಿಡುವಿದ್ದಾಗ ಇಬ್ಬರೂ ಮೀಟ್ ಆಗುತ್ತಾರಂತೆ. ಅಂದಹಾಗೇ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಕುಟುಂಬ ಸಮೇತರಾಗಿ ಬಂದಿದ್ದರಂತೆ. ಪುನೀತ್, ಯಶ್ ದಂಪತಿ ಮಗಳಿಗೆ ಒಂದು ಮುದ್ದಾದ ಉಡುಗೊರೆ ನೀಡಿದ್ದಾರಂತೆ. ಅಂದಹಾಗೇ ಮೊದಲ ಬಾರಿಗೆ ಯಶ್ ಮಗಳನ್ನು ನೋಡಿ ಪುನೀತ್ ಸೋ ಕ್ಯೂಟ್ ಎಂದಿದ್ದಾರೆ. ಅಷ್ಟೇ ಅಲ್ಲಾ ಫಸ್ಟ್ ಟೈಮ್ ಯಶ್ ದಂಪತಿ ಮಗುವಿಗೆ ಉಡುಗೊರೆ ಕೂಡ ಕೊಟ್ಟಿದ್ದಾರೆ. ಮಗುವಿಗೆ ಒಂದು ಜೊತೆ ಬಟ್ಟೆ ಅದರ ಜೊತೆ ದಿನನಿತ್ಯ ಬಳಸುವ ವಸ್ತು ಮತ್ತು ಒಂದು ದುಬಾರಿ ಬೆಲೆ ಬಾಳುವ ಉಂಗುರವನ್ನು ಕೂಡ ಕಳಿಸಿಕೊಟ್ಟಿದ್ದಾರಂತೆ.ಇನ್ನು ಈ ಉಡುಗೊರೆಗಳನ್ನು ನೋಡಿದ ಯಶ್ ಮತ್ತು ರಾಧಿಕಾ ದಂಪತಿ ಸ್ವತಃ ತಾವೇ ಪುನೀತ್ ರಾಜಕುಮಾರ್ ಗೆ ಕರೆ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
Comments