ಸಂಕ್ರಾಂತಿ ಹಬ್ಬದಂದೇ ಸಾವನ್ನಪ್ಪಿದ ಖ್ಯಾತ ನಟ- ನಟಿ…!!!
ಭಾರತೀಯ ಚಿತ್ರರಂಗಕ್ಕೆ ಸಂಕ್ರಾಂತಿ ಹಬ್ಬ ಶುಭ ನೀಡಲಿಲ್ಲ. ಎಲ್ಲರೂ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದರೆ, ಸಿನಿಮಾ ರಂಗ ಮಾತ್ರ ಕಣ್ಣೀರು ಹಾಕುವಂತೆ ಮಾಡಿದೆ. ಅಂದಹಾಗೇ ಮಕರ ಸಂಕ್ರಾಂತಿ ಹಬ್ಬದಂದೇ ಇಬ್ಬರು ಖ್ಯಾತ ನಟ-ನಟಿ ಸಾವನಪ್ಪಿದ್ದಾರೆ. ಇತ್ತೀಚೆಗೆ ಹಲವಾರು ಸ್ಟಾರ್ ಗಳು ಸಾವನಪ್ಪಿದ್ದೂ ಈ ಸಾಲಿಗೆ ಇದೀಗ ಈ ಇಬ್ಬರು ಕೂಡ ಸೇರ್ಪಡೆಯಾಗಿದ್ದಾರೆ. ಅಂದಹಾಗೇ ಹಿಂದಿ ಸಿನಿಮಾ ರಂಗದ ಮೋಸ್ಟ್ ಟ್ಯಾಲೆಂಟೆಡ್ ಆ್ಯಕ್ಟರ್ ಕಿಶೋರ್ ಪ್ರಧಾನ್ ಅವರು ಮರಣ ಹೊಂದಿದ್ದಾರೆ. ಲಾಗೆ ರಾಹೋ ಮುನ್ನಾ ಬಾಯ್ ,ಜಬ್ ವೀ ಮೆಟ್ ಸೇರಿದಂತೇ ಬಾಲಿವುಡ್ ನ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟ ಕಿಶೋರ್ ಪ್ರದಾನ್ ನಿಧನರಾಗಿದ್ದಾರೆ.
ಹಾಸ್ಯ ಕ್ಯಾರೆಕ್ಟ’ರ್ ನಲ್ಲಿ ಮಿಂಚುತ್ತಿದ್ದ ಕಿಶೋರ್ ಅವರು ಹಿಂದಿ ಮರಾಠಿಯಲ್ಲಿ ಫೇಮಸ್ ಆಗಿದ್ದರು. ಸದ್ಯ ನಮ್ಮೊಂದಿಗಿಲ್ಲ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸಾವನಪ್ಪಿದ್ದಾರೆ. ಇಂಗ್ಲೀಷ್, ಮರಾಠೀ ನಾಟಕಗಳಲ್ಲೂ ಕೂಡ ಅಭಿನಯಿಸಿದ್ದರು.ಹಬ್ಬದಂದೇ ಇನ್ನೊಬ್ಬ ಕಲಾವಿದೆ ಬಣ್ಣದ ಲೋಕದಿಂದ ದೂರವಾಗಿದ್ದಾಳೆ. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಬೇಕಿದ್ದ ನಟಿಯೊಬ್ಬರು ಸಾವನ್ನಪ್ಪಿದ್ದಾರೆ. ಎಸಿಪಿ ನಿಖಿತಾ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಿಖಿತಾ ಅವರು ಮನೆ ಟೆರೆಸ್ ಮೇಲಿನಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ .ಆಸ್ಪತ್ರೆಗೆ ದಾಖಲಿಸಿದ್ದರೂ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನಿಖಿತಾ ಅಲಿಯಾಸ್ ಲಕ್ಷ್ಮಿ ಪ್ರಿಯಾ ಕೊನೆಗೆ ಕೊನೆಯುಸೆರೆಳೆದಿದ್ದಾರೆ. ಅಷ್ಟೇ ಅಲ್ಲದೇ ಎಸಿಪಿ ನಿಖಿತಾ ಖ್ಯಾತಿಯ ನಿಖಿತಾಗೆ ಆರು ತಿಂಗಳ ಮಗುವಿದ್ದು ಇದೀಗ ಆ ಕಂದಮ್ಮ ಅನಾಥವಾಗಿದೆ. ಆದರೆ ಮೇಲ್ನೋಟಕ್ಕೆ ಇದು ಆಕಸ್ಮಿಕವೆಂದು ತಿಳಿದರೂ ಆತ್ಮಹತ್ಯೆಯೋ ಎಂದು ಶಂಕಿಸಲಾಗಿದೆ. ಲಕ್ಷ್ಮಿ ಪ್ರಿಯಾ ಹಿಂದಿ ಮತ್ತು ಒರಿಸ್ಸಾ ಭಾಷೆಯಲ್ಲಿ ಹೆಚ್ಚು ಪ್ರಸಿದ್ದಿ ಹೊಂದಿದ್ದರು.
Comments