ರಾಕಿ ಭಾಯ್ ಮೇಲೆ ಬಿತ್ತು ಪರಭಾಷಿಗರ ಕಣ್ಣು..!! ಇನ್ಮೇಲ್ ಕಾಲ್ ಶೀಟ್ ಸಿಗೋದೇ ಡೌಟ್..!!!

ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾ ಬಂದ ಮೇಲೆ ಒಂದು ರೀತಿಯ ಕ್ರೇಜ್ ಕ್ರಿಯೆಟ್ ಮಾಡಿದೆ.. ಪರಭಾಷಿಗರು ಕೂಡ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡಿದ್ದಾರೆ..ಸದ್ಯ ರಾಕಿಂಗ್ ಸ್ಟಾರ್ ಯಶ್ ನಾನು ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾಗೆ ಹೋಗಲ್ಲ ಎಂದು ಅದೆಷ್ಟೋ ಬಾರಿ ತಿಳಿಸಿದ್ದಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಂದ್ಮೇಲಂತೂ ಯಶ್ ಸ್ಯಾಂಡಲ್ ವುಡ್ ಕೈಯಿಂದ ಜಾರಿ ಹೋಗ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿರುವುದಂತೂ ಸುಳ್ಳಲ್ಲ,..ಕೆಜಿಎಫ್ ಸಿನಿಮಾ ಯಶ್ ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತ್ತು.. ಸ್ಯಾಂಡಲ್ ವುಡ್ ಗೆ ಒಂದೊಳ್ಳೆ ಬ್ರೇಕ್ ತಂದು ಕೊಟ್ಟಿತ್ತು..
ಕೆಜಿಎಫ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದ್ದ ಭರ್ಜರಿ ಪ್ರದರ್ಶನವನ್ನು ಕಂಡು ಗೆಲವನ್ನು ಕಂಡಿದೆ. ಇಷ್ಟು ದಿನ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿದ್ದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಿಂದಾಗಿ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಈ ಕೆಜಿಎಫ್ ಸಿನಿಮಾದಿಂದಾಗಿ ಯಶ್ ಬಹುಬೇಡಿಕೆಯ ನಟ ಆಗಿದ್ದಂತೂ ಸುಳ್ಳಲ್ಲ.. ಕೆಜಿಎಫ್ ಸಿನಿಮಾ 25 ದಿನ ಪೂರೈಸಿದೆ. ಇದರ ಹಿನ್ನಲೆಯ ಸಂತಸದಲ್ಲಿ ಕೆಜಿಎಫ್ ತಂಡ ಸಂತೋಷ ಕೂಟವನ್ನ ಸಿದ್ದಪಡಿಸಿತ್ತು... ಈ ವೇಳೆ ಮಾತನಾಡಿದ ಯಶ್ ''ಬೇರೆ ಭಾಷೆಯಿಂದ ಆಫರ್ ಬಂದಿರೋದು ನಿಜ'' ಎಂದು ತಿಳಿಸಿದ್ದಾರೆ ಕೆಜಿಎಫ್ 2 ಸಿನಿಮಾ ಮುಗಿದ ನಂತರ ಬೇರೆ ಭಾಷೆಗೆ ಹೋಗೋದೋ ಬೇಡ್ವ ಅಂತ ಯೋಚನೆ ಮಾಡೋಣ ಎಂದರು.. ಬಟ್, ಈಗಲೇ ಕಮಿಟ್ ಆಗೋದು ಬೇಡ ಅಂತ ಸುಮ್ಮನಾಗಿದ್ದೀನಿ. ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.
Comments