ಒಂದೇ ಸಾಂಗ್ ನಲ್ಲೇ ನ್ಯೂ ರೆಕಾರ್ಡ್ ಬರೆದ 'ಯಜಮಾನ': ಶಿವನಂದಿ ಸಾಂಗ್ ಹೇಗಿದೆ ಗೊತ್ತಾ..?
ಚಂದನವನದಲ್ಲಿ ಮೋಸ್ಟ್ ಎಕ್ಸ್’ಪೆಕ್ಟೇಷನ್ ಚಿತ್ರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಯಜಮಾನ' ಚಿತ್ರದ ಲಿರಿಕಲ್ ಸಾಂಗ್ ನೆನ್ನೆಯಷ್ಟೆ ಬಿಡುಗಡೆಯಾಗಿದ್ದು ದಾಖಲೆ ಬರೆದಿದ್ದು, ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.ಅಭಿಮಾನಿಗಳು ಕೂಡ ಇದರಿಂದ ಸಖತ್ ಖುಷಿಯಲ್ಲಿದ್ದಾರೆ. ವರ್ಷಗಳ ನಂತರ ದರ್ಶನ್ ಅಭಿನಯದ ಈ ಚಿತ್ರವು ಸಿಕ್ಕಾಪಟ್ಟೆ ಕ್ರೇಕ್ ಕ್ರಿಯೆಟ್ ಮಾಡಿದೆ.. ಯಜಮಾನದ ಚಿತ್ರದ ಈ ಹಾಡು ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿರೋ ಹಾಗೆ ಇದೆ..
ಈ ಯಜಮಾನ ಚಿತ್ರದ 'ಶಿವನಂದಿ..' ಲಿರಿಕಲ್ ಸಾಂಗ್ ಅನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ.. ಸೋಷಿಯಲ್ ಮೀಡಿಯಾದಲ್ಲಂತೂ ಸಖತ್ ಕ್ರೆಜ್ ಎಬ್ಬಿಸಿರೋದು ಸುಳ್ಳಲ್ಲ... ಈ ಸಾಂಗ್ ಬಿಡುಗಡೆಯಾದ 21 ಗಂಟೆ ಅವಧಿಯಲ್ಲಿಯೇ ಸರಿ ಸುಮಾರು 21.50 ಲಕ್ಷ ಮಂದಿ ನೋಡಿದ್ದು, 1.89 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಕಾಲಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ, ವಿಕಾಸ್ ಅವರು ಹಾಡಿರುವ ಈ ಸಾಂಗ್ ನಲ್ಲಿ ದರ್ಶನ್ ಅವರ ವ್ಯಕ್ತಿತ್ವವನ್ನು ಮತ್ತೊಮ್ಮೆ ತೆರೆ ಮೇಲೆ ಪರಿಚಯಿಸಲಾಗಿದೆ. ಸಂಕ್ರಾಂತಿ ವೇಳೆಯಲ್ಲೇ ನೆಚ್ಚಿನ ನಟನ ಸಿನಿಮಾ ಹಾಡು ರಿಲೀಸ್ ಆಗಿ ದಾಖಲೆ ಬರೆದಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಅಂದ ಹಾಗೇ ಬಿಡುಗಡೆಯಾದ ಕೇವಲ 5 ಗಂಟೆ ಅವಧಿಯಲ್ಲಿ ಬರೋಬ್ಬರಿ 1 ಮಿಲಿಯನ್ ವ್ಯೂವ್ಸ್ ಕಂಡಿರುವ ಈ ಸಾಂಗ್ ಕನ್ನಡದ ಯಾವ ಚಿತ್ರದ ಟೀಸರ್, ಟ್ರೇಲರ್, ಸಾಂಗ್ ಮಾಡಿರದ ದಾಖಲೆಯನ್ನು ಬರೆದಿದೆ ಎನ್ನಲಾಗಿದೆ.ಯೂಟ್ಯೂಬ್ ನಲ್ಲಿ ನಂ ಒನ್ ಟ್ರೆಂಡಿಂಗ್ ಅನ್ನು ಗಿಟ್ಟಿಸಿಕೊಂಡಿದದೆ. ಅಭಿಮಾನಿಗಳಿಗೆ ಇದರಿಂದ ಮತ್ತಷ್ಟು ಖುಷಿಯಾಗಿದೆ.
Comments