ಐಟಿ ಕಚೇರಿಗೆ ಬಂದಿದ್ದ ಸ್ಯಾಂಡಲ್’ವುಡ್ ಕಿಚ್ಚ ಸುದೀಪ್ ಹೇಳಿದ್ದೇನು..!?

ವಾರಗಳ ಹಿಂದಷ್ಟೆ ಸ್ಯಾಂಡಲ್ ವುಡ್’ನ ಕೆಲವು ಸ್ಟಾರ್ಸ್ ಗಳ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದರು.. ಇದರಿಂದ ಇಡಿ ಸ್ಯಾಂಡಲ್ ವುಡ್ ಗಾಬರಿಯಾಗಿತ್ತು.. ಅದರ ಹಿನ್ನಲೆಯಲ್ಲಿಯೇ ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಹಿನ್ನೆಲೆ ನಟ ಸುದೀಪ್ ಇಂದು ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿದ್ದರು. ಐಟಿ ಅಧಿಕಾರಿಗಳು ನೀಡಿದ್ದಂತಹ ನೋಟಿಸ್ ಕಾರಣಕ್ಕಾಗಿಯೇ ಸುದೀಪ್ ವಿಚಾರಣೆಗೆ ಬಂದಿದ್ದರು.. ವಿಚಾರಣೆಗಾಗಿ ಬಂದಿದ್ದರು. ಏಕೆಂದರೆ ಐಟಿ ರೇಡ್ ನಡೆದ ದಿನ ನೀಡಿರುವ ಹೇಳಿಕೆಗಳು ಸರಿಯಾಗಿದೆಯಾ ಅಥವಾ ಹೇಳಿಕೆ ಬದಲಾಗಬೇಕಾ ಎಂಬುದನ್ನ ದೃಢಿಕರೀಸಲು ಸುದೀಪ್ ಅವರಿಗೆ ತಿಳಿಸಲಾಗಿತ್ತು, ಹಾಗಾಗಿ, ಬಂದಿದ್ದರು ಎನ್ನಲಾಗಿದೆ.
ಐಟಿ ಕಚೇರಿಯಿಂದ ಹೊರಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್ ''ಕೆಲವು ಅಳಿಲು ತಪ್ಪು ಆಗಿರಬಹುದು ಅಥವಾ ದೊಡ್ಡ ತಪ್ಪು ಆಗಿರಬಹುದು. ಯಾವುದು ಉದ್ದೇಶಪೂರ್ವಕವಾಗಿಲ್ಲ. ಅದನ್ನ ಸರಿಪಡಿಸಿಕೊಳ್ಳಬಹುದು. ಅದಕ್ಕೊಂದು ಎಚ್ಚರಿಕೆ ಅಷ್ಟೇ'' ಎಂದು ಸುದೀಪ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ''ಐಟಿ ವಿಚಾರಣೆಯು ಸದ್ಯಕ್ಕೆ ಮುಗಿಯುದಿಲ್ಲ. ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ. ಐಟಿ ದಾಳಿ ನಡೆದಾಗ 'ಪೈಲ್ವಾನ್' ಶೂಟಿಂಗ್ ನಡೆಯುತ್ತಿತ್ತು. ಅದನ್ನ ಬಿಟ್ಟು ಇಲ್ಲಿಗೆ ಬಂದಿದ್ದೆ. ಇವತ್ತು ಕೂಡ 'ಸೈರಾ' ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿದಿದೆ..ಅಗತ್ಯವಿದ್ದಾಗ ನಮ್ಮ ಆಡಿಟರ್ ವಿಚಾರಣೆ ಹಾಜರಾಗ್ತಾರೆ'' ಎಂದು ಸುದೀಪ್ ಹೇಳಿದರು.
Comments