ಈ ಸ್ಯಾಂಡಲ್'ವುಡ್ ನಟಿ ಮೇಲೆ ಕಿಚ್ಚನಿಗೆ ಕ್ರಷ್ ಆಗಿತ್ತಂತೆ

ಸ್ಯಾಂಡಲ್ ವುಡ್ ಕಿಚ್ಚನಿಗೂ ಫಸ್ಟ್ ಲವ್ ಆಗಿತ್ತಂತೆ ಆ ನಟಿ ಮೇಲೆ. ರಹಸ್ಯವಾಗಿ ಪ್ರೀತಿಸುತ್ತಿದ್ದರಂತೆ ಆ ಹಿರೋಯಿನ್ ನನ್ನು. ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಖ್ಯಾತ ನಟ ಫಸ್ಟ್ ಲವ್ ಮಾಡಿದ್ದು ಯಾರನ್ನ ಗೊತ್ತಾ…? ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಸಿಕ್ಕರೆ ಯಾರನ್ನ ಪ್ರೀತಿಸ್ತೀರಾ ಅಂತಾ ಕೇಳಿದ್ರೆ ಯಾವ ಹೀರೋಯಿನ್ ಗಳಾಗಲೀ, ಯಾವ ಹುಡಗಿಯರಾಗಲೀ ಫಟ್ ಅಂತಾ ಸುದೀಪ್ ಹೆಸರು ಹೇಳುತ್ತಾರೆ. ಕಿಚ್ಚನ ವಾಯ್ಸ್, ಹೈಟು, ಫೈಟು, ಸ್ಟೈಲ್ ಐಕಾನ್ ಆಗಿರುವ ಕಿಚ್ಚನಿಗೆ ಫಿದಾ ಆಗದವರೇ ಇಲ್ಲ. ಇಂತಹ ಸ್ಟಾರ್ ಸುದೀಪ್ ಅವರೇ, ನಟಿಯೊಬ್ಬರನ್ನ ಇಷ್ಟಪಡುತ್ತಿದ್ದರಂತೆ. ಅವರ ಮೇಲೆ ಫಸ್ಟ್ ಲವ್ ಅಂಡ್ ಕ್ರಷ್ ಆಗಿತ್ತಂತೆ ಅಭಿನಯ ಚಕ್ರವರ್ತಿಗೆ. ಇತ್ತೀಚಿಗಷ್ಟೇ ರಿಯಾಲಿಟಿ ಶೋ ವೊಂದರಲ್ಲಿ ಮಾತನಾಡುತ್ತಿದ್ದ ಸುದೀಪ್ ಈ ಸತ್ಯ ರಿವೀಲ್ ಮಾಡಿದ್ದಾರೆ. ಅಂದಹಾಗೇ ಸುದೀಪ್ ಇಷ್ಟಪಡುತ್ತಿದ್ದ ಆ ನಾಯಕಿ ಯಾರು ಗೊತ್ತಾ..?
ಒಂದು ಕಾಲದಲ್ಲಿ ಸ್ಯಾಂಡಲ್’ವುಡ್ ನ್ನು ಆಳಿದ ಕನಸಿನ ರಾಣಿ. ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ರೊಮಾಂಟಿಕ್ ಹೀರೋಯಿನ್. ಸ್ಟಾರ್ ನಟರ ಜೊತೆ ನಟಿಸಿ ಸಕ್ಸ’ಸ್ ಚಿತ್ರಗಳನ್ನು ಕೊಟ್ಟ ಒನ್ ಅಂಡ್ ಓನ್ಲಿ ಹೀರೊಯಿನ್. ಅಂದಹಾಗೇ ಸುದೀಪ್ ಮನಸಿನಲ್ಲಿ ಪ್ರೀತಿಸುತ್ತಿದ್ದ ಸುಂದರಿ ಬೇರೆ ಯಾರು ಅಲ್ಲ. ಸ್ಯಾಂಡಲ್’ವುಡ್’ನ ಕ್ವೀನ್, ಕನಸಿನ ರಾಣಿ ಮಾಲಶ್ರೀ.. ಫಸ್ಟ್ ಟೈಮ್ ಮಾಲಾಶ್ರೀ ನೋಡಿ ಮನಸ್ಸಿನಲ್ಲಿ ಆರಾಧಿಸುತ್ತಿದ್ದರಂತೆ ಸುದೀಪ್. ಹಾಗಂತಾ ಶಿವರಾಜ್ ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ಯಾರೀ ವಿತ್ ನಂ.1 ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೇಳಿದ ಪ್ರಶ್ನೆಗೆ ಸುದೀಪ್ ನನ್ನ ಮೊದಲ ಪ್ರೀತಿ, ಕ್ರಷ್ ಎಲ್ಲವೂ ಮಾಲಶ್ರೀ ಅಂತಾ ಹೇಳಿಕೊಂಡಿದ್ದಾರೆ.
Comments