ಬಿಗ್'ಬಾಸ್ ನ ಶಶಿ ಪ್ರೀತಿಸ್ತಾ ಇರೋ ಹುಡುಗಿ ಕವಿತಾ ಅಲ್ವಂತೆ : ಮತ್ಯಾರು...?

ಬಿಗ್’ಬಾಸ್ ಸೀಸನ್ 6 ರಿಯಾಲಿಟಿ ಶೋ ಇನ್ನೇನೋ ಇನ್ನೆರಡು ವಾರಗಳು ಕಳೆದ್ರೆ ಫೈನಲ್ ಬರುತ್ತಿದೆ. ಅಂದಹಾಗೇ ಬಿಗ್ ಬಾಸ್ ಸ್ಪರ್ಧಿಗಳ ಕುಚುಕುಚು ಬಗ್ಗೆ ಅಲ್ಲಲ್ಲಿ ವಿಷಯಗಳು ಹರಿದಾಡುತ್ತಿವೆ. ನವೀನ್ ಸಜ್ಜುಗೆ ಐ ಲವ್ ಯೂ ಹೇಳಿದ ಸೋನು, ಅವನು ಲವರ್ ಅಲ್ಲ, ಜಸ್ಟ್ ಫ್ರೆಂಡ್ ಅಷ್ಟೆ ಅಂದು ಚರ್ಚೆಗೆ ಕಾರಣವಾಗಿದ್ದರು. ಇನ್ನೊಂದು ಕಡೆ ಅಕ್ಷತಾ-ರಾಕಿ ಸಂಬಂಧ. ಇದಷ್ಟೇ ಅಲ್ಲಾ ಕವಿತಾ-ಶಶಿ ನಡುವೆ ಕೂಡ ಕುಚ್ ಕುಚ್ ನಡೆಯುತ್ತಿದೆ ಎಂದು voot ಎಪಿಸೋಡ್ ನೋಡಿದ ಬಳಿಕ ಕೆಲವರು ಅಭಿಪ್ರಾಯಿಸಿದ್ದಾರೆ. ಸದ್ಯ 8 ಮಂದಿ ಪೈಕಿ ನಿನ್ನೆ ಅಕ್ಷತಾ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ. ಇನ್ನು 7 ಮಂದಿ ಇದ್ದಾರೆ. ಅಂದಹಾಗೇ ಬಿಗ್ ಬಾಸ್ ಮನೆಯಲ್ಲಿರುವ ನಿಜಕ್ಕೂ ಶಶಿ, ಕವಿತಾ ಅವರನ್ನ ಇಷ್ಟ ಪಡುತ್ತಿದ್ದಾರಾ..? ಅಥವಾ ಬೇರೆಯಾರನ್ನಾದ್ರೂ ಇಷ್ಟ ಪಡುತ್ತಿದ್ದಾರಾ ಎಂಬುದು ಬಹಳಷ್ಟು ಕುತೂಹಲಕಾರಿಯಾಗಿದೆ. ಮಾರ್ಡನ್ ರೈತ ಶಶಿ ಕವಿತಾ ಜೊತೆ ಮಾತನಾಡುವಾಗ ಅವಳು ಎಂಬ ಶಬ್ಧದ ಬಗ್ಗೆ ಕೇಂದ್ರೀಕರಿಸಿದ್ದಾರೆ. ಹಾಗಾದರೆ ಅವಳು ಯಾರು…?
ಶಶಿ-ಕವಿತಾ ಮಾತನಾಡುವಾಗ, ನಾನು ನಿನ್ನೊಂದಿಗೆ ಒಂದು ವಿಚಾರ ಹೇಳ್ತೇನೆ. ಕಿವಿ ಕೊಡು ಅದನ್ನು ಹೀಗೆಲ್ಲಾ ಓಪನ್ ಆಗಿ ಬಿಗ್ ಬಾಸ್ ಮನೆಯಲ್ಲಿ ಹೇಳಬಾರದು ಅಂತಾ ಹೇಳಿದ್ದಾರೆ. ಅದಕ್ಕೆ ಕವಿತಾ, ನಾನು-ನೀನು ಇಲ್ಲಿಯೇ ಇದ್ದೀವಿ. ಆದರೆ ಹೊರಗೆ ಇರೋ ಥರಾ 100% ಇಲ್ಲ. ನೀನು ಲವ್ ಮಾಡುತ್ತಿರುವ ಹುಡುಗಿ ಬಗ್ಗೆ ಚೆನ್ನಾಗಿ ತಿಳಿದುಕೋ. ಆ ನಂತರ ಮಾತನಾಡು ಎಂದಿದ್ದಾರೆ. ಅದಕ್ಕೆ ಶಶಿ ತನ್ನನ್ನು ಬಿಗ್ ಬಾಸ್ ಮನೆಯಲ್ಲಿ ಸೇಫ್ ಮಾಡಿಕೊಳ್ಳಲು ಹೆಸರೇಳದೇ ಅವಳು ಇಷ್ಟ. ಮನೆಯಿಂದ ಹೊರ ಹೋದ ನಂತರ ಹೇಳುತ್ತೇನೆ ಎಂದಿದ್ದಾರೆ. ಅದಕ್ಕೆ ಕವಿತಾ, ಅವಳ ಬಗ್ಗೆ ನೀನು ಚೆನ್ನಾಗಿ ತಿಳಿದುಕೋ, ಆ ನಂತರ ಮಾತನಾಡು ಎಂದು ನಕ್ಕು ಹೇಳಿದ್ದಾಳೆ. ಇಲ್ಲಿ ಇವರಿಬ್ಬರ ಸಂಭಾಷಣೆ ಪ್ರಕಾರ ಶಶಿ, ಲವ್ ಮಾಡ್ತಿರುವ ಹುಡುಗಿ ಕವಿತಾ..ಅಥವಾ ಬೇರೆ ಯಾರೋ ಹುಡುಗಿಯೋ ಎಂಬದನ್ನು ಹೈಡ್ ಮಾಡಿದ್ದಾರೆ. ಆದರೆ ಶಶಿಗೆ ಕವಿತಾ ಮೇಲೆ ಲವ್ ಇರೋದು ಗ್ಯಾರಂಟಿ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ನೋಡೋಣ ಬಿಗ್ ಬಾಸ್ ಮುಗಿದ ಮೇಲೆ ಗೊತ್ತಾಗದೇ ಇರದು.ಒಟ್ಟಾರೆ ಬಿಗ್ಬಾಸ್ ಸ್ಪರ್ಧಿ ಗಳ ಪೈಕಿ ಶಶಿಕುಮಾರ ಕೂಡ ಸ್ಟ್ರಾಂಗ್ ಕಂಟೆಸ್ಟಂಟ್. ಈ ಸೀಸನ್ನಿನ ವಿನ್ನರ್ ಆಗುತ್ತಾರೆ ಎಂಬ ಅಭಿಪ್ರಾಯಗಳು ಹೆಚ್ಚಾಗುತ್ತಿವೆ.
Comments