ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟು ಪಿಜಿ ಸೇರಿದ ಸ್ಯಾಂಡಲ್’ವುಡ್ ನಟಿ…!!

ಸ್ಯಾಂಡಲ್'ವುಡ್’ ನ ಖ್ಯಾತ ನಟಿಯೊಬ್ಬರು ತಮ್ಮ ವೈವಾಹಿಕ ಜೀವನವನ್ನು ಮುರಿದುಕೊಂಡು ಬೀದಿಪಾಲಾಗಿದ್ದಾರೆ. ಅಂದಹಾಗೇ ತಾನೇ ಪ್ರೀತಿಸಿ ಮದುವೆಯಾದ ನಟಿ, ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ. ಲವ್ ಇನ್ ಮಂಡ್ಯ ಖ್ಯಾತಿಯ ಸಿಂಧು ಲೋಕನಾಥ್ ಕರಾವಳಿ ಮೂಲದ ಶ್ರೇಯಸ್ ಎಂಬಾತನನ್ನು ಕೈ ಹಿಡಿದಿದ್ದರು. ಅದ್ಯಾಕೋ ಸಂಸಾರದ ನೌಕೆ ಸರಿಹೊಂದದ ಕಾರಣ ಸಿಂಧು ಲೋಕನಾಥ್ ಮನೆಯಿಂದ ಹೊರ ನಡೆದು ಆಸರೆಗಾಗಿ ಪಿಜಿಯಲ್ಲಿ ಉಳಿದುಕೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಸದ್ದಿಯಿಲ್ಲದೇ ಮದುವೆಯಾಗಿದ್ದ ಸಿಂಧು ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದಾರೆ. ಈಗಾಗಲೇ ಪಿಜಿಯಲ್ಲಿ ಇರುವ ಸಿಂಧು ತಾನೇ ಡೈವೋರ್ಸ್ ಪಡೆಯಲು ವಕೀಲರನ್ನು ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಯಾರೇ ಕೂಗಾಡಲೀ, ಐರಾವತ ಸಿನಿಮಾಗಳಲ್ಲಿಯು ಕೂಡ ನಟಿಸಿದ್ದ ಸಿಂಧು ಕೇಸ್ ನಂ. 18/9, ಲೈಫು ಇಷ್ಟೇನೆ, ಕಾಫಿ ವಿತ್ ವೈಫ್ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಂದಹಾಗೇ ಇತ್ತೀಚಿಗಷ್ಟೇ ಸಿಂಧು ಸಿನಿಮಾವೊಂದಕ್ಕೆ ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ದರು.
Comments