ಬಿಗ್ ಬಾಸ್ ಸ್ಪರ್ಧಿ ಆರ್ಜೆ ರಶ್ಮಿ ಬಿಚ್ಚಿಟ್ಟ ಕಣ್ಣೀರ ಕಥೆ...ಕರಾಳ ಸತ್ಯ ಕೇಳಿದ್ರೆ ಕಣ್ಣೀರು ಬರುತ್ತೆ....

ಬಿಗ್ ಬಾಸ್ ಸೀಸನ್6 ರ ಸ್ಪರ್ಧಿ ಆರ್ ಜೆ ರಶ್ಮಿ ಮನೆಯಲ್ಲಿರುವ ಸದ್ಯ 8 ಕಂಟೆಸ್ಟಂಟ್ಸ್ ಪೈಕಿ ಅವರು ಒಬ್ಬರು. ಇತ್ತೀಚಿಗೆ ಮನೆಯಲ್ಲಿ ಕೆಲ ಟಾಸ್ಕ್ಗಳ ಮೂಲಕ ಮನೆ ಮಂದಿಯನ್ನು ಗೆಲ್ಲುತ್ತಿದ್ದ ರ್ಯಾಪಿಡ್ ರಶ್ಮಿಗೆ ಫಸ್ಟ್ ಟೈಮ್ ಸಾರ್ಮಜನಿಕವಾಗಿ ತಮ್ಮ ವೈಯಕ್ತಿಕ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತಾನು ಏನಾಗಿದ್ದೆ, ಈಗ ಏನಾಗಿದ್ದೀನಿ ಎಂಬ ನನ್ನ ಕಥೆ ಟಾಸ್ಕ್ ಮೂಲಕ ಕಣ್ಣೀರ ಕಥೆ ಮೂಲಕ ಎಲ್ಲರು ಕಣ್ಣೀರು ಹಾಕುವಂತೆ ಮಾಡಿದ್ದಾರೆ.
ಡೇರ್ ರಶ್ಮಿ ಅಂತಾನೇ ಬಿಗ್ ಬಾಸ್ ಸ್ಪರ್ಧಿಗಳು ಇವರನ್ನು ಕರೆಯುತ್ತಾರೆ. ರಶ್ಮಿಗೆ ಇದು ಎರಡನೇ ಮದುವೆ. 2007 ರಲ್ಲಿ ಮೊದಲ ಮದುವೆಯಾಗಿದ್ದ ರಶ್ಮಿ ಎರಡು ವರ್ಷಗಳ ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು. ಅವರೊಂದಿಗೆ ರಶ್ಮಿ ಸಂಸಾರ ನಡೆಸುವುದು ತೀರಾ ಕಷ್ಟವೆನಿಸಿದಾಗ ಹೊರ ಬಂದ ರಶ್ಮಿ ಗೆ ವೈಯಕ್ತಿಕ ಬದುಕು ಸಾಕಷ್ಟು ಪೆಟ್ಟು ಕೊಟ್ಟಿತ್ತು. ಮೊದಲೇ ಅಮ್ಮನಿಗೆ ಡೈವೋರ್ಸ್ ಆಗಿ ಮಗಳನ್ನು ಸಾಕಿದ್ದ ತಾಯಿಗೆ ಮಗಳ ಲೈಫ್ ನೋಡಿ ನೋವು ಅನುಭವಿಸಬೇಕಾಯ್ತು. ಆದರೆ ರಶ್ಮಿಗೆ ಆತನೊಂದಿಗೆ ಲೈಫ್ ನಡೆಸಲು ಆಗುತ್ತಿರಲಿಲ್ಲ. ಹಾಗಾಗಿ ಅವರೇ ಬಂದು ಡೈವೋರ್ಸ್ ಅಪ್ಲೈ ಮಾಡಿದ್ದರು.
ಅಮ್ಮ, ನೀನು ವಿಚ್ಚೇದನ ಪಡೆದುಕೊಂಡರೆ ನನ್ನ ಪಾಲಿಗೆ ಸತ್ತಂತೆ ಎಂದರು. ಆದರೆ ರಶ್ಮಿ ಕೊನೆಗೆ ಡಿವೋರ್ಸ್ ಪಡೆದುಕೊಂಡರು. ತುಂಬಾ ದಿನಗಳ ಕಾಲ ತಾಯಿ-ಮಗಳು ಮಾತನಾಡುತ್ತಿರಲಿಲ್ಲ. ಆಗ ತಾನೇ ಆರ್ ಜೆ ಆಗಿದ್ದ ರಶ್ಮಿಗೆ ಡಿಪ್ರೆಶನ್ ನಲ್ಲಿದ್ದರಂತೆ. ಆ ನಂತರ ಅಮ್ಮನ ಫ್ರೆಂಡ್ ರಶ್ಮಿ ಹಾಗೂ ಅಮ್ಮನನ್ನು ಮಾತನಾಡುವಂತೆ ಮಾಡಿದ್ದರು ಎಂದು ಕಣ್ಣೀರು ಹಾಕಿದ್ರು. ಅಮ್ಮನ ಲೈಫ್ ಥರಾನೇ ನನ್ನ ಮಗಳು ಲೈಫ್ ಆಯ್ತು ಎಂದು ರಶ್ಮಿ ಸಾಕಷ್ಟು ನೋವಿನಲ್ಲಿದ್ದರಂತೆ. ಇದೇ ಸಂದರ್ಭದಲ್ಲಿ ಡೇವಿಸ್ ಪರಿಚಯವಾಯ್ತು. ಸ್ನೇಹ ಪ್ರೀತಿಯಾಗಿ ಮೂರು ವರ್ಷಗಳ ಕಾಲ ಇಬ್ಬರು ಪ್ರೀತಿಸಿದೆವು. ಮದುವೆ ವಿಚಾರಕ್ಕೆ ಬಂದಾಗ ಡೇವಿಸ್ ಮನೆಯಲ್ಲಿ ನನ್ನನ್ನು ಒಪ್ಪಿಕೊಳ್ಳಲು ರೆಡಿಯಿರಲಿಲ್ಲ. ಅವರಿಗೆ ಇದು ಮೊದಲ ಮದುವೆ, ನನಗೆ ಸೆಕೇಂಡ್ ಮ್ಯಾರೇಜ್. ಕೊನೆಗೆ ಎಲ್ಲರ ವಿರೋಧದಲ್ಲಿಯೇ ಡೇವಿಸ್ ನನ್ನ ಮದುವೆಯಾದ್ರು. ಸದ್ಯ ನಾವಿಬ್ರು ಚೆನ್ನಾಗಿಯೇ ಇದ್ದೀವಿ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ತುಂಬಾ ಪ್ರೀತಿಸುತ್ತೇವೆ. ಆರು ವರ್ಷಗಳಿಮದ ಚೆನ್ನಾಗಿದ್ದೇವೆ ಎಂದು ತಾವು ಪಟ್ಟ ಬದುಕಿನ ನೋವಿನ ಕಣ್ಣೀರ ಕಥೆ ಹೇಳಿದ್ರು.
Comments