'ಯಾರು ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡಬೇಡ್ರಯ್ಯಾ'...! ರಾಕಿಂಗ್ ಸ್ಟಾರ್

ಇಂದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರಾಕಿಂಗ್ ಸ್ಟಾರ್ ಸ್ವಲ್ಪ ಗರಂ ಆದಂತೆ ಕಂಡು ಬಂದರು. ನನ್ನನ್ನು ಯಾರು ಪರ್ಸನಲ್ ಆಗಿ ತಗೋಬೇಡ್ರಯ್ಯಾ..ನಾನು ನಿಮ್ಮಂತೇ ಸಾಮಾನ್ಯ ಮನುಷ್ಯ. ಇಂದು ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ನಾನು ಬಂದಿದ್ದೇನೆ ಅಷ್ಟೆ. ಅದೂ ಬಿಟ್ಟರೇ ಏನು ಇಲ್ಲವೆಂದರು. ನನ್ನ ಮನೆಯಲ್ಲಿ ಅಷ್ಟು ಹಣ ಸಿಕ್ತು, ಇಷ್ಟು ಚಿನ್ನ ಸಿಕ್ತು ಅಂತಾ ಅಧಿಕಾರಿಗಳೇನೂ ಹೇಳಿದ್ದಾರಾ..? ಅಥವಾ ನೀವೇನು ನೋಡಿದ್ದೀರಾ..? ಸುಖಾಸುಮ್ಮನೇ ಗಾಸಿಪ್ ಹಬ್ಬಿಸಬೇಡಿ ಎಂದರು.
ಅಧಿಕಾರಿಗಳು 8-9 ರ ರಂದು ವಿಚಾರಣೆಗೆ ಕರೆದಿದ್ದರು.ಆದರೆ ಅವರಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ದೆ. 8 ರಂದು ನನ್ನ ಹುಟ್ಟಿದಹಬ್ಬ ಇರುವುದರಿಂದ 10 ರಂದು ಹಾಜರಾಗುತ್ತೇನೆ ಎಂದೆ ಅದಕ್ಕೆ ಅವರು 11 ಕ್ಕೆ ಬರುವುದಕ್ಕೆ ಹೇಳಿದ್ದರು. ಇಂದು ಬಂದಿದ್ದೇನೆ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೀನಿ ಎಂದರು.ಇನ್ನೂ 40 ಕೋಟಿ ಸಾಲದ ಬಗ್ಗೆ ಪ್ರಶ್ನೆ ಕೇಳಿದಾಗ, ನನಗೆ 40 ಕೋಟಿ ಸಾಲ ಯಾಕೆ ಕೊಡುತ್ತಾರೆ. ನನ್ನ ಪ್ರಕಾರ ನನಗೆ 15 ರಿಂದ 16 ಲೋನ್ ಇದೆ. 15-16 ಕೋಟಿ ಲೋನ್ ಕೊಡಬೇಕಾದರೆ, ತೆರಿಗೆ ಎಷ್ಟಿರಬೇಕು? ತೆರಿಗೆ ಕಟ್ಟಿಲ್ಲ ಅಂದರೆ ಯಾರಾದರೂ ಲೋನ್ ಕೊಡುತ್ತಾರಾ ಎನ್ನುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಗೊತ್ತಾದರೆ ಸಾಕು. ಸಾರ್ವಜನಿಕ ವ್ಯಕ್ತಿ ಎಂದಾಕ್ಷಣ ಇಷ್ಟಬಂದಂತೆ ಒಬ್ಬರ ಬಗ್ಗೆ ಮಾತನಾಡಿಕೊಂಡು, ತೇಜೋವಧೆ ಮಾಡಿಕೊಂಡು ಇದ್ದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರುವವರಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು..
ತಾಯಿ ಪುಷ್ಪಾ ಜೊತೆ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಅಧಿಕಾರಿಗಳ ಕಚೇರಿಗೆ ಬಂದ ಯಶ್,ಮಾಧ್ಯಮದವರಿಗೆ ಪ್ಲೀಸ್ ಕೋ ಅಪರೇಟ್ ಮಾಡಿ. ಅದೂ ಬಿಟ್ಟು ಸುಖಾಸುಮ್ಮನೇ ಏನೇನೋ ಹೇಳಬೇಡಿ ಎಂದು ಖಾರವಾಗಿ ಹೇಳಿ ಕಾರು ಹತ್ತಿದ್ದಾರೆ.
Comments