ಹೋಟೆಲ್ ಸ್ಕ್ಯಾಂಡಲ್'ನಲ್ಲಿ ಸಿಕ್ಕಿಬಿದ್ದ ಬಿಗ್'ಬಾಸ್ ಸ್ಪರ್ಧಿ..!!!

ಆಕೆ ಬಡ ಕುಟುಂಬದ ಹೆಣ್ಣು ಮಗಳು. ಹರಿಯಾಣದಲ್ಲಿ ಹುಟ್ಟಿದ ಸಾಮಾನ್ಯ ಹುಡುಗಿ. ಇಂದು ಸಿನಿಮಾ ಲೋಕದ ಸೂಪರ್ ಸ್ಟಾರ್. ಈಕೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡ್ತಾ ಇದ್ದರೆ ಸಾವಿರಾರು ಯುವಕರು ಹುಚ್ಚೆದ್ದು ಕುಣಿಯುತ್ತಿದ್ದರು. ಅವಳ ಅಂದಿನ ಮೈ ಮಾಟ ನೋಡಿ ಬಾಯಿ ಚಪ್ಪರಿಸದವರೇ ಇಲ್ಲ. ಕೆಲವೊಂದಿಷ್ಟು ಮಂದಿ ಇವಳನ್ನು ನೋಡಿ ಸಿನಿಮಾ ಆಫರ್ ಕೊಟ್ರು. ಕೆಲವೇ ತಿಂಗಳಲ್ಲಿ ದೊಡ್ಡ ಸೆಲೆಬ್ರಿಟಿಯಾದ ಸ್ವಪ್ನಾ ಚೌದರಿ ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾದ್ರು. ಹಿಂದಿಯ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿ ಕೂಡ ಆಗಿದ್ದರು. ನೇಮು-ಫೇಮು ಸಿಕ್ತು, ಬಣ್ಣದ ಲೋಕದಲ್ಲಿ ತೇಲುತ್ತಿದ್ದ ಈಕೆ ಒಂದು ದಿನ ರಾಜಕೀಯ ವ್ಯಕ್ತಿಯೋರ್ವನ ಜೊತೆ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಯ್ತು. ಪೊಲೀಸರ ಮುಂದೆ ಹೋಟೇಲ್’ನಲ್ಲಿ ಅಪರಾಧಿ ಸ್ಥಾನದಲ್ಲಿ ಸಿಕ್ಕಿಬಿದ್ದ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡತೊಗಿದವು.
ಸೆಲೆಬ್ರಿಟಿ ಉತ್ತುಂಗದಲ್ಲಿದ್ದ ಸ್ವಪ್ನಾ ಚೌದರಿ ಹೋಟೇಲ್ ಸ್ಕ್ಯಾಂಡಲ್’ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಸ್ವಪ್ನ ಚೌದರಿ ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ನಾನು ಯಾರ ಜೊತೆಯೂ ಮಲಗಿರಲಿಲ್ಲ. ಹೋಟೆಲ್’ನಲ್ಲಿ ಇರಲಿಲಲ್ಲವೆಂದರು. ಆದರೆ ವಿಪರ್ಯಾಸವೆಂದರೆ ಇದೆಲ್ಲಾ ಆದ ನಂತರ ಸ್ವಪ್ನಾಗೆ ಸಿನಿಮಾಗಳು ಸಾಕಷ್ಟು ಅರಸಿ ಬಂದವು. ಮತ್ತಷ್ಟು ಆಕೆಗೆ ಸಿನಿಮಾ ಕ್ರೇಜ್ ಹೆಚ್ಚಾಯ್ತು. ಆದರೆ ಇದನ್ನೆಲ್ಲಾ ನೋಡುತ್ತಿದ್ದವರಿಗೆ ಯಾವುದು ನಂಬುವುದು, ಯಾವುದು ಬಿಡುವುದು ಗೊತ್ತಾಗಲಿಲ್ಲ.ಹಿಂದಿಯ ನಾನು ಕೀ ಜಾನು, ಆ್ಯಕ್ಷನ್ ಕ್ವೀನ್ ಮಧುಬಾಲ,ಬೈರಿ ಕಂಗನಾ -2, ದೋಸ್ತಿ ಕೀ ಸೈಡ್ ಎಫೆಕ್ಟ್ ಸೇರಿದಂತೆ ಇತರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಸ್ವಪ್ನಾ ಕನ್ನಡದ ಕ್ರೇಜಿ ಸ್ಟಾರ್ ರವೀಚಂದ್ರನ್ ಸಿನಿಮಾದಲ್ಲೂ ನಟಿಸಿದ್ದಾರೆ.
Comments