ಎಲ್ಲರ ಮುಂದೆ ವಿಡಿಯೋಕಾಲ್ ಮಾಡಿ ನಿವ್ವಿಗೆ ಹೇಳಿದ್ದೇನು ಗೊತ್ತಾ ಚಂದನ್ ಶೆಟ್ಟಿ...!!!
ಕಳೆದ ಬಿಗ್ ಬಾಸ್ ಸೀಸನ್’ನಲ್ಲಿ ಸ್ಪರ್ಧಿಗಳು ಇನ್ನು ವೀಕ್ಷಕರ ಮನದಲ್ಲಿ ಹಾಗೇ ಉಳಿದು ಬಿಟ್ಟಿದ್ದಾರೆ. Rap star ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾಗೌಡರದ್ದೇ ಎಲ್ಲೆಲ್ಲಿಯೂ ಮಾತು. ಚಂದನ್ ಆಗಲೀ ಅಥವಾ ನಿವೇದಿತಾ ಆಗಲೀ ಯಾವ ಕಾರ್ಯಕ್ರಮಕ್ಕೆ ಹೋದ್ರೂ ಇವರಿಬ್ಬರದ್ದೇ ಮಾತಾಗುತ್ತಿತ್ತು. ಅಂದಹಾಗೇ ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಉತ್ಸವಕ್ಕೆ ಕನ್ನಡದ ಖ್ಯಾತ Rap star ಚಂದನ್ ಶೆಟ್ಟಿ ಆಗಮಿಸಿ, ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದ್ದಾರೆ. ಆದರೆ ಇದೇ ವೇದಿಕೆ ಮೇಲೆ ಚಂದನ್, ಗೊಂಬೆ ನಿವ್ವಿ ಗೆ ವಿಡಿಯೋ ಕಾಲ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ. ಅಂದಹಾಗೇ ಏನ್ ವಿಚಾರ ಗೊತ್ತಾ..?
ಕಳೆದ ಬಾರಿಯೂ ಕುಮುಟಾಗೆ ಬಂದಿದ್ದಾಗ ನಿವೇದಿತಾ ಗೌಡಗೆ ಕಾಲ್ ಮಾಡಿದ್ರಿ, ಈಗ ನಿವೇದಿತಾ ಗೌಡರನ್ನು ವೇದಿಕೆ ಮೇಲೆ ಹೇಗೆ ಕರೆಸುತ್ತೀರಿ ಎಂದು ಅಭಿಮಾನಿಗಳ ಪ್ರಶ್ನೆಗೆ ಚಂದನ್ ಶಾಕ್ ಕೊಟ್ರು. ನಿವ್ವಿ ಈ ಕಾರ್ಯಕ್ರಮದಲ್ಲಿರುವವರನ್ನು ಲೈವ್ ಆಗಿಯೇ ನೋಡುತ್ತಾರೆಂದು ಫೋನ್ ತೆಗೆದ್ರು. ವಿಡಿಯೋ ಕಾಲ್ ಮಾಡಿ, ನಿವ್ವಿ ಜೊತೆ ಮಾತನಾಡಿದಾಗ ಚಂದನ್ ಶೆಟ್ಟಿ ಗೆ ಅಭಿಮಾನಿಗಳಿಂದ ಚಪ್ಪಾಳೆ, ಶಿಳ್ಳೆಗಳ ಅಭಿಮಾನವೇ ಹರಿದುಬಂತು. ಇನ್ನು ಗೊಂಬೆ ಕೂಡ ಚಂದನ್ ಜೊತೆ ತಮ್ಮದೇ ಆದ ಸ್ಟೈಲ್ ನಲ್ಲಿ ಮಾತನಾಡಿ, ಕಾರ್ಯಕ್ರಮಕ್ಕೆ ಬಂದಿರುವವರನ್ನು ಎಂಜಾಯ್ ಮಾಡಿ ಎಂದು ವಿಶ್ ಮಾಡಿದ್ದಾರೆ.
ಇದೇ ಅಂಕೋಲ ಉತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಅವರ ಪತ್ನಿ ಶ್ರಾವಣಿ ಇಬ್ಬರನ್ನು ಕೂಡ ಆಹ್ವಾನಿಸಲಾಗಿತ್ತು. ಚಂದನ್ ಶೆಟ್ಟಿಯ ಹಾಡಿಗೆ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಈ ಮಧ್ಯೆ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಮೈಕ್ ನೀಡಿದ್ದರು. ಆ ಅಭಿಮಾನಿ ಚಂದನ್ ಗೆ, ನಿಮ್ಮ ಮತ್ತು ಶೃತಿ ಸಂಪರ್ಕ ಹೇಗಿದೆ ಈಗ. ಬಿಗ್ ಬಾಸ್‍ನಲ್ಲಿ ಪ್ರತಿಸ್ಪರ್ಧಿಯಾದ ಶೃತಿ ಜೊತೆ ಇನ್ನೂ ಸಂಪರ್ಕದಲ್ಲಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಚಂದನ್ ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 5 ನಲ್ಲಿ ಚಂದನ್ ಶೆಟ್ಟಿ ವಿನ್ನರ್ ಆಗಿದ್ದರು.ಬಿಗ್ ಬಾಸ್ ಮನೆಯಲ್ಲಿ ಚಂದನ , ನಿವ್ವಿ ಮೇಲಿಟ್ಟ ಗೌರವ, ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು.
Comments