ನಟ ಯಶ್'ಗೆ ಮತ್ತೆ ಐಟಿ ಡ್ರಿಲ್...!!!
ಸ್ಯಾಂಡಲ್ ವುಡ್ ಟಾಪ್ ಸ್ಟಾರ್’ಗಳ ಪೈಕಿ ನಟ ರಾಕಿಂಗ್ ಸ್ಟಾರ್ ಯಶ್ ಗೆ ಐಟಿ ಭೂತ ಬಿಟ್ಟಂತೆ ಕಾಣುತ್ತಿಲ್ಲ. ಯಾಕೋ ನಟ ಯಶ್ ಗೆ ಈ ವರ್ಷ ಅದೃಷ್ಟ ಕೈ ಹಿಡಿದಂತಿಲ್ಲ. ಒಂದು ಕಡೆ ಮಗಳು ಲಕ್ಷ್ಮಿ ರೂಪದಲ್ಲಿ ಮನೆಗೆ ಬಂದಿದ್ದಾಳೆ ಎಂದು ಅಭಿಪ್ರಾಯಿಸಿದರೆ ಮತ್ತೊಂದು ಕಡೆ ಗಳಿಸಿದ ಲಕ್ಷ್ಮಿ ಎಲ್ಲಿ ಕೈ ಬಿಟ್ಟು ಹೋಗುತ್ತಾಳೆ ಎಂಬ ಭೀತಿ. ನಾಲ್ಕು ದಿನಗಳ ಕಾಲ ಐಟಿ ರೇಡ್’ನಿಂದ ಸ್ವಲ್ಪರೆಸ್ಟ್ ತೆಗೆದುಕೊಳ್ಳುತ್ತಿರುವಾಗಲೇ ಮತ್ತೆ ಐಟಿ ಭಯ ಆರಂಭವಾಗಿದೆ ನಟ ಯಶ್'ಗೆ.
ನಿನ್ನೆ ತಡರಾತ್ರಿ ರಾಕಿಂಗ್ ಸ್ಟಾರ್ ಯಶ್ ಅವರ ಅಡಿಟರ್ ಬಸವರಾಜ್ ಅವರ ಕಚೇರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ಯಶ್ ಸೇರಿದಂತೆ ಹಲವು ಸ್ಟಾರ್ ಗಳಿಗೆ ಅಡಿಟರ್ ಆಗಿರುವ ಬಸವರಾಜ್ ಬಳಿ ಎಲ್ಲರ ಬ್ಯಾಂಕ್ ಡೀಟೈಲ್ಸ್ ಮತ್ತಿತರ ದಾಖಲೆ ಕೇಳಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಬಸವರಾಜ್ ಬಳಿ ಇದ್ದ ಕೆಲ ನಟರ ದಾಖಲೆಗಳನ್ನು ಹೊತ್ತಯ್ದಿದ್ದಾರೆ, ದಾಖಲೆಗಳ ಪರಿಶೀಲನೆ ಬಳಿಕ ನಟ ಮತ್ತೆ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.
ಈಗಾಗಲೇ ನಟ ಯಶ್ ಮನೆಯಲ್ಲಿ ಸಿಕ್ಕಿರುವ ಕೆಲ ದಾಖಲೆಗಳು, ಹಾಗೂ ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಯಶ್ ಮನೆಯಷ್ಟೇ ಅಲ್ಲದೇ ಯಶ್ ಮಾವ, ರಾಧಿಕಾ ಪಂಡಿತ್ ತಂದೆಯ ಮನೆಯು ಕೂಡ ಐಟಿ ರೇಡ್ ಆಗಿದೆ. ನಿನ್ನೆ ಯಶ್ ಅಡಿಟರ್ ಬದವರಾಜ್ ಮನೆ ಮೇಲೂ ರೈಡ್ ಆಗಿದೆ. ಸದ್ಯ ಮಾಹಿತಿಗಳ ಪ್ರಕಾರ ನಟ ಯಶ್'ಗೆ ಐಟಿಯಿಂದ ಸದ್ಯಕ್ಕಂತೂ ಮುಕ್ತಿಯಿಲ್ಲ ಎಂಬ ಮಾತುಗಳು ಹೆಚ್ಚಾಗಿ ಆಪ್ತವಲಯಗಳಲ್ಲಿ ಕೇಳಿ ಬರುತ್ತಿವೆ.
Comments