ಪೇಟಾ ಸಿನಿಮಾ ಮುಂದೆ ನವ ವಿವಾಹಕ್ಕೆ ಕಾಲಿಟ್ಟ ರಜನೀಕಾಂತ್ ಅಭಿಮಾನಿ...!
ತಮಿಳರ ಕಲಾ ರಸಿಕ , ಕಾಲಿವುಡ್’ನ ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಿನಿಮಾ ಪೇಟಾ ಇಂದು ರಿಲೀಸ್ ಆಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕರ್ನಾಟಕದಲ್ಲಿ ರಜನಿ ಅಭಿಮಾನಿಗಳು ಬೆಳಗ್ಗೆ ನಾಲ್ಕಕ್ಕೆ ಥಿಯೇಟರ್ ನಲ್ಲಿ ಸಾಲುಗಟ್ಟಿ ನಿಂತಿದ್ದರು. ಪೇಟಾವನ್ನು ನೋಡಲು ಫ್ಯಾನ್ಸ್. ಫಾಲೋಯರ್ಸ್ ಬಹುದಿನಗಳಿಂದ ಕಾಯುತ್ತಿದ್ದರು. ಅಷ್ಟೇ ಯಾಕೆ ಸಿನಿಮಾ ರಿಲೀಸ್ ಆಗಿದ್ದೇ ತಡ ರಜನಿ ಪ್ಲೆಕ್ಸ್ ಗೆ ಹಾಲಿನ ಅಭಿಷೇಕ, ಬೃಹತ್ ಗಾತ್ರ ಹೂವಿನ ಹಾರ,ಪಟಾಕಿ ಸಿಡಿಸಿ ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿ ರಜನೀಕಾಂತ್ ಅಭಿಮಾನಿಯೊಬ್ಬರು ವಿಶಿಷ್ಟ ರೀತಿಯಲ್ಲಿ ತಮ್ಮ ಸ್ಟಾರ್ ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೇ ನಾವು ಮದುವೆಯಾಗಬೇಕು ಅಂತಾ ಹೇಳಿದ್ರೆ ಅದಕ್ಕೆ ಘಳಿಗೆ, ಟೈಮ್ ಶಾಸ್ತ್ರೋಕ್ತವಾಗಿ ನಡೀಬೇಕೆಂದು, ಅದಕ್ಕಾಗಿ ಇನ್ನಿಲ್ಲದ ತಯಾರಿಯನ್ನು ಕೂಡ ಮಾಡಿಕೊಳ್ತೇವೆ. ಆದರೆ ರಜನೀಕಾಂತ್ ಅಬಿಮಾನಿಯೊಬ್ಬರು ಥಿಯೇಟರ್ ಎದುರಲ್ಲೇ ಮದುವೆಯಾಗಿ ವಿಶೇಷ ರೀತಿಯಲ್ಲಿ ಗಮನ ಸೆಳೆದಿದ್ದಾರೆ.ಚೆನ್ನೈನ ವುಡ್ ಲ್ಯಾಂಡ್ಸ್ ಥಿಯೇಟರ್ ನಲ್ಲಿ 'ಪೆಟ್ಟಾ' ಬಿಡುಗಡೆಯಾಗಿದ್ದು, ಚಿತ್ರಮಂದಿರದ ಎದುರಲ್ಲೇ ರಜನಿಕಾಂತ್ ಅಭಿಮಾನಿಗಳಾಗಿರುವ ಅಂಬಸು ಮತ್ತು ಕಮಾಚಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಥಿಯೇಟರ್ ಎದುರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಸಿನಿಮಾ ನೋಡಲು ಬಂದಿದ್ದ ರಜನಿಕಾಂತ್ ಅಭಿಮಾನಿಗಳು ಉಡುಗೊರೆ ನೀಡಿ, ಶುಭ ಹಾರೈಸಿದ್ದಾರೆ.
Comments