ನಮ್ಮ ಬಾಸ್​ ಹೇಳಿದ ರೀತಿ ಕೇಳು..!! ಬೇಕಾದಷ್ಟು ದುಡ್ಡುಕೊಡುತ್ತೇವೆ ಎಂದು ಬಿಗ್’ಬಾಸ್​ ಕವಿತಾಗೆ ಹೇಳಿದ್ದು ಯಾರು ಗೊತ್ತಾ..?

10 Jan 2019 3:32 PM | Entertainment
4823 Report

ಬಣ್ಣದ ಲೋಕನೇ ಹಾಗೆ ಕೆಲವರನ್ನು ಕೈ ಬೀಸಿ ಕರೆಯುತ್ತಿದೆ.. ಇನ್ನೂ ಕೆಲವರನ್ನು ಕೈ ಬಿಡುತ್ತದೆ. ಆದರೆ ಬಣ್ನದ ಲೋಕದಲ್ಲಿ ನೆಲೆ ಕಂಡುಕೊಳ್ಳುವುದು ತುಂಬಾ ಕಷ್ಟವೆ ಸರಿ.. ಅದರಲ್ಲು ಹೆಣ್ಣು ಮಕ್ಕಳಿಗೆ ಕೆಲವೊಮ್ಮೆ ಸಾಕಪ್ಪ ಸಾಕು ಅನಿಸಿ ಬಿಡುತ್ತದೆ.. ಸಿನಿಮಾ ಲೋಕ ಬಣ್ಣದ ಲೋಕ ನೋಡುವುದಕ್ಕೆ ಎಷ್ಟು ಸುಂದರವಾಗಿ ಕಾಣುತ್ತದೆಯೋ ಅಷ್ಟೇ ಕುರೂಪವಾಗಿಯು ಕೂಡ ಇರುತ್ತದೆ ಎಂದು ಹೇಳುತ್ತಾರೆ. ಇನ್ನು ಇಲ್ಲಿ ಅವಕಾಶ ಬೇಕು ಅಂದ್ರೆ ಮಂಚ ಏರೋಕು ರೆಡಿ ಇರಬೇಕು. ಈ ಬಗ್ಗೆ ಈಗಾಗಲೇ ನಟಿಯರು ತಮಗಾದ ಅನುಭವಗಳ ಬಗ್ಗೆ ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿರುವ ಚಿನ್ನು ಅಲಿಯಾಸ್​ ಕವಿತಾ ಗೌಡ ಅವರಿಗೂ ಕೂಡ ಇದೇ ರೀತಿಯ ಅನುಭವಗಳಾಗಿದೆ ಎಂದು ಹೇಳಿಕೊಂಡಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ  ಚಿನ್ನು ಆಗಿ ಅಭಿನಯಿಸುತ್ತಿದ್ದ ಕವಿತಾ ಗೌಡ ಅವರನ್ನು ಹುಡುಕಿಕೊಂಡು ಒಬ್ಬ ದೊಡ್ಡ ಡೈರೆಕ್ಟರ್​ ಪಿಎ ಬಂದು ಇವರನ್ನು ಕೇಳಿದನಂತೆ. ನಮ್ಮ ಬಾಸ್​ ನಿರ್ಮಿಸುತ್ತಿರುವ ಮುಂದಿನ ಸಿನಿಮಾಗೆ ನಿಮ್ಮನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಂತೆ. ನಮ್ಮ ಬಾಸ್​ ಆಸೆಯನ್ನು ಈಡೇರಿಸಿದರೆ ನಿಮಗೆ ಬೇಕಾದಷ್ಟು ಹಣ ನೀಡುತ್ತೇವೆ ಎಂದು ಆಫರ್ ಕೂಡ​ ಇಟ್ಟಿದ್ದನಂತೆ. ಆ ಆಫರ್​ ಅನ್ನು ರಿಜೆಕ್ಟ್​ ಮಾಡಿದ ಕವಿತಾ ಗೌಡ ಆ ಮ್ಯಾನೆಜರ್​ಗೆ ಬೈದು ಕಳುಹಿಸಿದ್ದಾರೆ. ಇನ್ನೊಬ್ಬ ನಿರ್ಮಾಪಕ ಸಿನಿಮಾ ಮಾಡಬೇಕು ಕಥೆಯ ಬಗ್ಗೆ ಚರ್ಚೆ ಮಾಡೊಣ ಬನ್ನಿ ಎಂದು ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್​ ಒಂದಕ್ಕೆ ಕರೆಸಿಕೊಂಡಿದ್ದನಂತೆ. ಆದರೆ ಅಲ್ಲಿ ಕಥೆ ಡಿಸ್ಕಷನ್​ ಮಾಡುವುದಕ್ಕೆ ಬೇರೆ ಯಾರು ಇರದೆ ನಿರ್ಮಾಪಕ ಮಾತ್ರ ಇದ್ದರಂತೆ. ಕಥೆ ಹೇಳುವವರು, ಸಿನಿಮಾ ಟೀಂ ಯಾರು ಕೂಡ ಅಲ್ಲಿ ಇರಲಿಲ್ಲ, ಆ ನಿರ್ಮಾಪಕ ಕಥೆ ಬಗ್ಗೆ ಚರ್ಚೆ ಮಾಡೋಣ ಕುಳಿತುಕೊಳ್ಳಿ ಎಂದು ಹೇಳಿದ್ದ, ಅದನ್ನು ಗಮನಿಸಿದ ಕವಿತಾ ಈ ಸಿನಿಮಾದ ಸಹವಾಸವೇ ಬೇಡ ಎಂದು ಹೊರ ಬಂದೆ ಎಂದು ಅವರು ಖಾಸಗಿ ವಾಹಿನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ.

Edited By

Manjula M

Reported By

Manjula M

Comments