ಎಲಿಮಿನೇಷನ್'ಗೂ ಮುನ್ನ ಬಿಗ್'ಬಾಸ್ ಮನೆಯಿಂದ ಹೊರಬಂದ ಆ್ಯಂಡಿ...?

10 Jan 2019 3:09 PM | Entertainment
529 Report

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಇನ್ನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ ನ ಬಗ್ಗೆ ಅನೇಕ ರೀತಿಯ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿ ಬಂದ್ರೂ, ಸದ್ಯ ಮನೆಯೊಳಗೆ 8 ಮಂದಿ ಇದ್ದಾರೆ. ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಈ ವಾರದ ಎಪಿಸೋಡ್ ಫ್ಯಾಮಿಲಿ ಎಪಿಸೋಡ್ ಆಗಿತ್ತು.ಇರುವ 8 ಕಂಟೆಸ್ಟಂಟ್,ಗಳ ಫ್ಯಾಮಿಲಿಯ ಒಬ್ಬೊಬ್ಬ ಸದಸ್ಯರು ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದಾರೆ. ಶಾಕಿಂಗ್ ಏನಪ್ಪಾ ಅಂದ್ರೆಈ ವಾರ ಎಲಿಮಿನೇಷನ್ ಶನಿವಾರ ಆರಂಭವಾಗುವ ಮೊದಲೇ ಸ್ಪರ್ಧಿಯೊಬ್ಬರು ಮನೆಯಿಂದ ಹೊರ ಬೀಳ್ತಾರಾ ಎಂಬುದು…?  ಮಗನನ್ನು ನೋಡಲು ಬಂದ ಅಪ್ಪ, ಬಿಗ್ ಬಾಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗ್ತಾರಾ ಎಂಬುದು. ಬಿಗ್ ಬಾಸ್ ಮನೆಯ ಕಿರಿಕ್ ಅಂತಾನೇ ಕರೆಯುವ, ಆ್ಯಂಡಿ ಅಲಿಯಾಸ್ ಆ್ಯಂಡ್ರೂವ್ ತಂದೆ ಕೂಡ ಬಂದಿದ್ದಾರೆ. ಆದರೆ ಬಂದ ಸ್ಪರ್ಧಿಗಳ ಪೋಷಕರ ಪೈಕಿ ಆ್ಯಂಡೂ ತಂದೆ ಮಾತ್ರ ಮಗನನ್ನು ನೋಡಿ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಅಂದಹಾಗೇ ಎಲಿಮಿನೇಷನ್ಗೆ ಇನ್ನು ಮೂರು ದಿನಗಳಿವೆ. ಆದರೆ ಎಲಿಮಿನೇಷನ್ ಬರುವ ಮುನ್ನವೇ ಮನೆಯಲ್ಲಿನ ಆ್ಯಂಡ್ರ್ಯೂ ವನ್ನು ನೋಡಲು ಬಂದ ತಂದೆ ಬಿಗ್ ಬಾಸ್ ಮನೆಯಿಂದ ಕರೆದುಕೊಂಡು ಹೋಗುತ್ತಾರಂತೆ. ಆ್ಯಂಡಿ ಬಿಗ್.ಬಾಸ್ ಆರಂಭವಾದ ಮೊದಲ ವಾರದಿಂದಲೂ ಸ್ಪರ್ಧಿಗಳಿಗೆ ಇರಿಟೇಟ್ ಮಾಡುತ್ತಲೇ ಬಂದಿದ್ದ. ವಾರಂತ್ಯದಲ್ಲಿ ಅನೇಕ ಬಾರಿ ಸುದೀಪ್ ಕಿವಿಮಾತು ಹೇಳಿದ್ರೂ ಕೇಳದ  ಆ್ಯಂಡಿ ಮನೆ ಮಂದಿಗೆಲ್ಲಾ ಒಂದಿಲ್ಲೊಂದು ಕಿರಿಕ್ ಮಾಡುತ್ತಾ, ಕಾಲೆಳೆಯುತ್ತಾ…ಇರಿಟೇಡ್ ಮಾಡುತ್ತಲೇ ಬಂದಿದ್ದ. ಟಾಸ್ಕ್ ಗಳ ಮೂಲಕ ಎದುರಾಳಿಗಳನ್ನು ಸಾಕಷ್ಟು ಹಿಯಾಳಿಸಿದ್ದಾರೆ. ವೀಕ್ಷಕರ ವಲಯದಿಂದಲೂ  ಆ್ಯಂಡಿಗೆ ಭಾರೀ ವಿರೋಧ ವ್ಯಕ್ತವಾಯ್ತು. ಎಲ್ಲಾ ಸ್ಪರ್ಧಿಗಳಂತೇ  ಆ್ಯಂಡಿ ತಂದೆಯು ಕೂಡ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ.

ಆದರೆ ಆ್ಯಂಡಿಗೆ ಗೆದ್ದು ಬಾ ಎಂದು ವಿಶ್ ಮಾಡುವ ಬದಲು, ನೀನು ನನ್ನೊಂದಿಗೆ ಮನೆಯಿಂದ ಹೊರ ನಡಿ. ನೀನು ಇಲ್ಲಿಯವರ  ಪ್ರೀತಿ ಸಂಪಾದನೆ ಮಾಡು ಅಂದ್ರೆ , ಎಲ್ಲರನ್ನ ದ್ವೇಷ ಕಟ್ಕೊಂಡಿದ್ಯಾ..ಬಿಗ್ ಬಾಸ್ ಮನೆಯಲ್ಲಿನ ನಿನ್ನ ವರ್ತನೆಯಿಂದ ನಾವು (ತಂದೆ-ತಾಯಿಗೆ ) ತುಂಬಾ ದುಃಖವಾಗಿದೆ. ದಯಮಾಡಿ ಬಿಗ್ ಬಾಸ್ ಆ್ಯಂಡಿಯನ್ನ ನನ್ನೊಂದಿಗೆ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಅಪ್ಪನ ಕೋಪದಿಂದ ಆ್ಯಂಡಿ ವಿಚಿಲತನಾಗಿ, ಅಪ್ಪನನ್ನು ಕನ್ವಿನ್ಸ್ ಮಾಡಲೆತ್ನಿಸಿದ್ದಾರೆ. ಆದರೆ ಆ್ಯಂಡ್ರೀವ್ ಮನೆಯಿಂದ ಹೊರ ಬೀಳ್ತಾರಾ..? ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರಾ ಎಂಬುದನ್ನು ಕಾದು ನೋಡಬೇಕು.

Edited By

Kavya shree

Reported By

Kavya shree

Comments