ಚಾಲೆಂಜಿಂಗ್ ಸ್ಟಾರ್ ಕೈಗೆ ಮುತ್ತಿಕ್ಕಿ ಕಿರಿಕ್ ಮಾಡಿದ ಅಭಿಮಾನಿ...!!! ವಿಡಿಯೋ ನೋಡಿ
ಸ್ಯಾಂಡಲ್’ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರ್ಯಕ್ರಮಕ್ಕೆ ಬಂದಿದ್ದ ತಮ್ಮ ನೆಚ್ಚಿನ ಸ್ಟಾರ್ ನೋಡಲು ಗುಂಪು ಗುಂಪು ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಅಭಿಮಾನಿಗಳನ್ನು ಬೆನ್ನು ತಟ್ಟಿ, ಕೈ ಶೇಕೆಂಡ್ ಕೊಟ್ಟು ಪ್ರೀತಿಯಿಂದ ಮಾತನಾಡುತ್ತಿದ್ದ ದರ್ಶನ್, ಆ ಅಭಿಮಾನಿಯಿಂದ ಇರಿಟೇಟ್ ಆಗಿದ್ದಂತೂ ನಿಜ. ದರ್ಶನ್ ನೋಡಲು ಬಂದ ಆತ ದರ್ಶನ್ ಕೈ ಹಿಡಿದು ಮುತ್ತಿಕ್ಕುತ್ತಾ ಅವರನ್ನು ಕ್ಷಣ ಮುಜುಗರಕ್ಕೀಡಾಗುವಂತೆ ಮಾಡಿತು.ಅಂದಹಾಗೇ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ….
ಸ್ಟಾರ್’ಗಳನ್ನು ಪ್ರೀತಿಸುವ ಅದೆಷ್ಟೋ ಅಭಿಮಾನಿಗಳಿಗೆ ಹುಚ್ಚು ಅಭಿಮಾನ ಅತಿರೇಕವಾಗಿರುತ್ತೆ. ನಿನ್ನೆಯಷ್ಟೇ ಯಶ್ ಅಭಿಮಾನಿಯೊಬ್ಬರು,ಯಶ್ ತಮ್ಮ ಬರ್ತ್ ಡೇ ಆಚರಿಸಿಕೊಂಡಿಲ್ಲ, ಹುಟ್ಟುಹಬ್ಬ ಆಚರಿಸಿಕೊಳ್ಳದ ಅವರನ್ನು ನೋಡಲು ಆಗುವುದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡನು. ಹುಚ್ಚು ಅಭಿಮಾನ ಸ್ಟಾರ್’ಗಳನ್ನು ಆಪತ್ತಿಗೆ ತಳ್ಳುವುದು, ಅವರಿಗೆ ನೋವು ತರಿಸುವುದು ಇತ್ತೀಚೆಗೆ, ಅದರಲ್ಲೂ ಸ್ಯಾಂಡಲ್'ವುಡ್'ನಲ್ಲಿ ಹೆಚ್ಚಾಗುತ್ತಿರೋದಂತೂ ನಿಜ.
Comments