ಇಂದು ಐಟಿ ಅಧಿಕಾರಿಗಳ ಮುಂದೆ ಯಶ್ ವಿಚಾರಣೆಗೆ ಹಾಜರ್...!

ಸ್ಯಾಂಡಲ್ ವುಡ್ ನಲ್ಲಿ ನಾಲ್ಕೈದು ದಿನಗಳ ಹಿಂದೆ ದಿಢೀರ್ ಅಂತಾ ಗ್ರಹಣ ತಟ್ಟಿದ ವಿಚಾರ ಗೊತ್ತಿರಬೇಕಲ್ಲವೇ…? ಅಂದಹಾಗೇ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಗಳ ಮನೆ ಮೇಲೆ ಐಟಿ ರೈಡ್ ಆಗಿ ಇಡೀ ಸ್ಯಾಂಡಲ್ವುಡ್ಡೇ ಮೋಡ ಕವಿದ ವಾತವರಣದಂತಿತ್ತು. ಸದ್ಯ ಯಶ್, ಸುದೀಪ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಅವರ ಮನೆಯನ್ನು ಮೂರು ದಿನಗಳ ಕಾಲ ತಪಾಸಣೆ ಮಾಡಿದ ಬಳಿಕ ಅಧಿಕಾರಿಗಳು, ಕೆಲ ದಾಖಲೆಗಳ ಸಮೇತ ಹಿಂದಿರುಗಿದ್ದೂ ಆಯ್ತು. ಸದ್ಯ ಸ್ಟಾರ್ ನಟರನ್ನು ವಿಚಾರಣೆಗೆ ಬರುವಂತೆ ನೋಟೀಸ್ ಕೂಡ ಜಾರಿ ಮಾಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಗೆ ಇಂದು ವಿಚಾರಣೆ ಹಾಜರಾಗಲು ಅಧಿಕಾರಿಗಳು ತಿಳಿಸಿದ್ದಾರಂತೆ. ತಪಾಸಣೆ ವೇಳೆ ಮನೆಯಲ್ಲಿ ಸಿಕ್ಕ ಕೆಲ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ದಾಖಲೆಗಳಿಗೆ ಸಂಬಂಧಿಸಿದಂತೇ ವಿಚಾರಣೆ ಮಾಡುವ ಸಾಧ್ಯತೆ ಇದೆ.ಈಗಾಗಲೇ ನಿರ್ಮಾಪಕರಾದ ಸಿ.ಆರ್ ಮನೋಹರ್, ರಾಕ್ ಲೈನ್ ವೆಂಕಟೇಶ್, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಐಟಿ ಅಧಿಕಾರಿಗಳ ಮುಂದೆ ಯಶ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಅಧಿಕಾರಿಗಳು ಜ.3 ರಂದು ಸ್ಟಾರ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿ 109 ಕೋಟಿ ರೂ.ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಹಚ್ಚಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗ್ತಿದೆ.
Comments