ರಜನೀಕಾಂತ್ 'ಪೇಟಾ' ನೋಡಲು ಸಾಲುಗಟ್ಟಿ ನಿಂತ ಕನ್ನಡಿಗರು...!!!

ತಮಿಳಿನ ಸೂಪರ್ ಸ್ಟಾರ್, ತಮಿಳು ಕಲಾಭಿಮಾನಿಗಳ ಆರಾಧ್ಯ ದೈವ ರಜನೀಕಾಂತ್ ಗೆ ಕಾಲಿವುಡ್ ಇಂಡಸ್ಟ್ರಿ ಅಲ್ಲದೇ ಕರುನಾಡಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಇಂದು ಬಿಡುಗಡೆಯಾಗಿರುವ ರಜನೀ ಹೊಸ ಸಿನಿಮಾ ಪೇಟಾ ಗೆ ಎಲ್ಲಿಲ್ಲದ ಬೇಡಿಕೆ ಕ್ರಿಯೇಟ್ ಆಗಿದೆ. ಮುಂಜಾನೆ ನಾಲ್ಕು ಗಂಟೆಗೆಯೇ ಪೇಟಾ ಬೆಂಗಳೂರಿನ ಥಿಯೇಟರ್’ಗಳಲ್ಲಿ ಅಬ್ಬರಿಸ್ತಾ ಇದೆ. ಮುಂಜಾನೆ ಆರಂಭವಾದ ಶೋಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ನಿದ್ದೆ ಮಂಪರಿನಲ್ಲಿದ್ದವರು ಮಾರ್ನಿಂಗ್ ಶೋ ನೋಡಲು ಸಾಲು ನಿಂತಿದ್ದಾರೆ. ಅಭಿಮಾನಿಗಳನ್ನು ಮನರಂಜಿಸೋಕೆ ರಜನೀಕಾಂತ್ ಮೂರು ಭಾಷೆಗಳಲ್ಲಿ, 150 ಸ್ಕ್ರೀನ್ ಗಳಲ್ಲಿ ಪೇಟಾನಾಗಿ ಬಂದಿದ್ದಾರೆ.
ರಜಿನಿಕಾಂತ್‌ಗೆ ಕನ್ನಡದಲ್ಲೂ ಬಹಳ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ವರ್ಷ ಗಟ್ಟಲೇ ರಜನೀ ಸಿನಿಮಾಗೆ ಕಾಯ್ತಾ ಇರೋ ಮಂದಿಯೆಷ್ಟೋ…!. ತಮ್ಮ ಸ್ಟಾರ್ ಸಿನಿಮಾ, ಅಂದ್ರೆ ದೊಡ್ಡ ,ಮಟ್ಟ ಕ್ರೇಜ್ ತಲೈವಾ ಅಭಿಮಾನಿಗಳಿಗೆ. ರಜನೀಕಾಂತ್ ರ ಫಣಿಯಪ್ಪರಂತೇ ಇಂದಿಗೂ ಅದೇ ಕ್ರೇಜ್ ನಲ್ಲಿ ಬರುವ ಹೊಸ ಸಿನಿಮಾಗಳನ್ನು ನೋಡುವ ಅಭಿಮಾನಿಗಳು ಅಪಾರ. ಹಲವು ಅಭಿಮಾನಿಗಳುಪೇಟಾ ಕೇಕ್ ಕಟ್ ಮಾಡುವುದರ ಮೂಲಕ, ಪೇಟಾ ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ತಲೆ ಮೇಲೆ ಪೇಟಾ ಅಂತಾ ಬರೆಸಿಕೊಂಡು ಅಭಿಮಾನ ಮೆರೆದಿದ್ದಾರೆ. ಪೇಟಾ ಸಿನಿಮಾಗಾಗಿ ಕಾಯುತ್ತಿದ್ದ ಕಾರ್ಪೋರೆಟ್ ಕಂಪನಿಗಳ ಸಿಬ್ಬಂದಿ, ಕೆಲ ಪ್ರದೇಶಗಳ ಗಣ್ಯ ವ್ಯಕ್ತಿಗಳು ಪೇಟಾಗಾಗಿ ಮಾಸ್ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಬಹಳ ದಿನಗಳ ನಂತರ ಈ ರೀತಿಯ ಬುಕ್ಕಿಂಗ್ ಆಗುತ್ತಿದೆ. ಇಲ್ಲಿಯವರೆಗೂ ಮಲ್ಟಿಪ್ಲೆಕ್ಸ್‌ಗಳು ಸೇರಿ 250 ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಆಗಿದೆ. ರಜಿನಿ ಮೇಲಿನ ಅಭಿಮಾನಕ್ಕಾಗಿ ಅಭಿಮಾನಿಯೊಬ್ಬ ಕಾರ್ ಮೇಲೆ ಚಿತ್ರವನ್ನೂ ಬಿಡಿಸಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಪೇಟಾ ರಜಿನಿಕಾಂತ್, ವಿಜಯ್ ಸೇತಿಪತಿ, ತ್ರಿಶಾ, ಸಿಮ್ರಾನ್ ನಟನೆಯ ಸಿನಿಮಾ. ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್‌ನಿಂದ ನಿರ್ಮಾಣವಾಗಿದೆ. ಈ ಮಧ್ಯೆ ರಜನೀಕಾಂತ್ ಕನ್ನಡಿಗರಿಗೆ ಒಂದು ಗುಡ್ ನ್ಯೂಸ್ ಹೇಳಿದ್ದಾರೆ. ಇಷ್ಟರಲ್ಲೇ ತಮ್ಮ ಸಿನಿಮಾ ಪೇಟಾ ಕನ್ನಡದಲ್ಲೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೇ ಕನ್ನಡದಲ್ಲಿ ಸ್ವತಃ ರಜನೀಯೇ ಡಬ್ ಮಾಡಲಿದ್ದಾರಂತೆ. ರಜನೀ ಬಾಯಲ್ಲಿ ಕನ್ನಡ ಕೇಳೋಕೆ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇರೋದಂತೂ ನಿಜ.
Comments