ಡಿ-ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಜಮಾನ ಚಿತ್ರ ತಂಡ..!!

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಲುವುದಿಲ್ಲ ಎಂದು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದರು.. ಆದರೆ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ .ಡಿ ಬಾಸ್ ಅಂದರೆ ಹುಚ್ಚೆದ್ದು ಕುಣಿಯುವ ಅಭಿಮಾನಿಗಳು ಇದ್ದಾರೆ… ಅವರ ಸಿನಿಮಾ ಬಂದು ವರ್ಷವೇ ಆಯ್ತು.. ಇದರಿಂದ ಅಭಿಮಾನಿಗಳು ಕೊಂಚ ನಿರಾಸೆಯಾಗಿದ್ದರು.. ಆದರೆ ಇದೀಗ ಫುಲ್ ಖುಷಿಯಲ್ಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಸಂಕ್ರಾಂತಿಗೆ ಬಹುನಿರೀಕ್ಷಿತ ಯಜಮಾನ ಚಿತ್ರದ ಮೊದಲ ಹಾಡು ಬಿಡಗಡೆಯಾಗಲಿದೆ ಎಂಬ ಗುಡ್ ನ್ಯೂಸ್ ಅನ್ನು ಚಿತ್ರತಂಡ ತಿಳಿಸಿದೆ. ಎಸ್..ಜನವರಿ 15 ರಂದು ಡಿ ಬಿಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಯಜಮಾನ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಲಿದೆ. ಶಿವಾನಂದಿ ಎನ್ನುವ ಸಾಹಿತ್ಯವಿರುವ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯವನ್ನು ಬರೆದಿದ್ದಾರೆ. ಇನ್ನೂ ಈ ಚಿತ್ರಕ್ಕೆ, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ಸ್ವಿಡನ್ ನಲ್ಲಿ ನಡೆದಿದ್ದು, ಇನ್ನೊಂದು ಹಾಡಿನಲ್ಲಿ ದರ್ಶನ್ ನೂರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದಾರೆ. ಪಿ. ಕುಮಾರ್ ನಿರ್ದೆಶನದ ಈ ಚಿತ್ರಕ್ಕೆ ಶೈಲಜಾ ನಾಗ್ ಅವರು ಬಂಡವಾಳ ಹೂಡಿದ್ದಾರೆ. ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದು ತೆರೆ ಮೇಲೆ ಯಾವ ರೀತಿ ಮೂಡುತ್ತದೆ ಎನ್ನುವುದನ್ನು ಕಾದು ನೊಡಬೇಕಿದೆ.
Comments