ಕೊನೆಗು ಕೊನೆಯಾಯ್ತು 'ಯಶ್' ಮೇಲಿನ ಅಭಿಮಾನ...!!!
ರಾಕಿಂಗ್ ಸ್ಟಾರ್ ಯಶ್ ಗೆ ನಿನ್ನೆ ಜನ್ಮದಿನದ ಸಂಭ್ರಮ. ಆದರೆ ಆ ಸಂಭ್ರಮ ಯಶ್ಗಿರಲಿಲ್ಲ. ತಮ್ಮ ಪ್ರೀತಿಯ ಸ್ಟಾರ್ ಅಂಬರೀಶ್ ಅವರ ಸಾವಿನಿಂದ ತಾನು ಈ ಬಾರು ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದರೆ ಹುಚ್ಚು ಅಭಿಮಾನ ಮೆರೆಯುವ ಅಭಿಮಾನಿಗಳನ್ನು ತಡೆಯುವುದಾದರು ಹೇಗೆ...? ಬೆಂಗಳೂರಿನ ನಿವಾಸಿಯೊಬ್ಬ ತಮ್ಮ ನೆಚ್ಚಿನ ಸ್ಟಾರ್ ಯಶ್ ಹುಟ್ಟುಹಬ್ಬ ಮಾಡಿಕೊಳ್ತಿಲ್ಲ, ಅವರನ್ನು ನೋಡಲು ಆಗುವುದಿಲ್ಲವೆಂದು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ದುರಾದೃಷ್ಟವಶಾತ್ ಹುಚ್ಚು ಅಭಿಮಾನದಿಂದ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಮೃತಪಟ್ಟಿದ್ದಾನೆ
ಯಶ್ ಅವರ ಹೊಸಕೆರೆಹಳ್ಳಿ ಮನೆ ಮುಂಭಾಗದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಗಾಯಾಳು ರವಿಯನ್ನು ವಿಕ್ಟೋರಿಯಾ ಆಸ್ಟತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 1.30 ರ ಸುಮಾರಿಗೆ ರವಿ ಮೃತಪಟ್ಟಿದ್ದಾನೆ.ಸೋಶಿಯಲ್ ಮಿಡಿಯಾ ಮೂಲಕ ಸಾಕಷ್ಟು ಬಾರಿ ಯಶ್, ಅಂಬಿ ಸಾವಿನಿಂದ ನಾನು ಬೇಜಾರಿನಲ್ಲಿದ್ದೇನೆ. ನಾನು ಹುಟ್ಟುಹಬ್ಬ ಮಾಡಿಕೊಂಡು ಸಂಭ್ರಮಿಸಲು ಹೇಗೆ ಸಾಧ್ಯ. ಈ ವರ್ಷ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ವರ್ಷ ನಿಮ್ಮನ್ನು ನಾನು ನೋಡಲು ಕಾತುರನಾಗಿ ಕಾಯುತ್ತಿರುತ್ತೇನೆ. ನಾನು ಇದು ಅಂಬಿಗೆ ನಾನು ಸಲ್ಲಿಸುವ ಗೌರವ ಎಂದಿದ್ದರು. ಅಷ್ಟೇ ಅಲ್ಲ, ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂಬ ಸುದ್ದಿ ಕೇಳಿ ಶಾಕ್ ಆದ ಯಶ್, ಇದೇ ರೀತಿ ಮಾಡುವುದಾದರೆ ನಾನು ಚಿತ್ರರಂಗ ಬಿಡುತ್ತೇನೆಂದು ವಾರ್ನ್ ಮಾಡಿದ್ದಾರೆ.
Comments