ಅಂಬಿ ಮೇಲಿನ ಅಭಿಮಾನಕ್ಕಾಗಿ ಚಾಲೆಂಜಿಂಗ್ ಸ್ಟಾರ್ ಮಾಡಿದ್ದೇನು ಗೊತ್ತಾ...?
ರೆಬೆಲ್ ಸ್ಟಾರ್ ಅಂಬಿ ತಮ್ಮ ಮಗನ ಸಿನಿಮಾ ತೆರೆಗೆ ಬರುವ ಮೊದಲೇ ಸಾವನ್ನಪ್ಪಿದ್ದರು. ಸಿನಿಮಾ ಇಂಡಸ್ಟ್ರಿಗೆ ಪುತ್ರನನ್ನು ಪರಿಚಯಿಸಿದ ಅಂಬಿ ಅಮರ್ ಹೆಸರಿನ ಮೂಲಕ ಅಭಿಷೇಕ್ ಅಂಬರೀಶ್ ರನ್ನು ಸ್ಯಾಂಡಲ್ವುಡ್ಗೆ ಇಂಟರ್ಡ್ಯೂಸ್ ಮಾಡಿಸಿದ್ದರು. ಅಂಬಿಯನ್ನು ಚಿತ್ರರಂಗದಲ್ಲಿ ಪ್ರೀತಿಸದವರೇ ಇಲ್ಲ. ಇವರೊಂಥರಾ ಅಜಾತ ಶತೃ ಇದ್ದಾಗೆ. ಅಂದಹಾಗೇ ಜೂನಿಯರ್ ಸ್ಟಾರ್ಗಳ ಮೋಸ್ಟ್ ಫೇವರೀಟ್ ಅಂಬಿ ಇಂದು ನಮ್ಮೊಂದಿಗಿಲ್ಲ. ಈಗಾಗಲೇ ಅಭಿಷೇಕ್ ಅಂಬಿಗೆ ಸ್ಯಾಂಡಲ್ವುಡ್ನಲ್ಲಿ ಯಶ್, ನಿಖಿಲ್ ಕುಮಾರಸ್ವಾಮಿ, ದರ್ಶನ್, ಸುದೀಪ್ ತುಂಬಾ ಆತ್ಮೀಯರಾಗಿದ್ದಾರೆ. ಈಗ ತಮ್ಮ ಮೋಸ್ಟ್ ಫೇವರೀಟ್ ಅಂಬಿ ಅಭಿಮಾನಕ್ಕಾಗಿ, ಅವರ ಮಗನಿಗೆ ಡಿ ಬಾಸ್ ಖ್ಯಾತಿಯ ದರ್ಶನ್ ಫುಲ್ ಸಾಥ್ ನೀಡುತ್ತಿದ್ದಾರೆ.
ಅಂದಹಾಗೇ ದರ್ಶನ್ ಮತ್ತು ಅಭಿ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್, ಅಲ್ಲದೇ ಅದೇ ಆರಡಿ ಎತ್ತರದ ಅಭಿಷೇಕ್ ಅಂಬಿ ಒಂದೇ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ತೆರೆಮೇಲೆ ಇವರಿಬ್ಬರ ಜುಗಲ್ಬಂಧಿ ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ. ಅಂದಹಾಗೇ ಈಗಾಗಲೇ ಅಮರ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ನಾಯಕನಟನಾಗಿ ಅಭಿನಯಿಸ್ತಾ ಇದ್ದಾರೆ. ಅದೇ ಸಿನಿಮಾದಲ್ಲಿ ದರ್ಶನ್ ಕೂಡ ನಟಿಸ್ತಾ ಇದ್ದಾರೆಂಬ ಹೊಸ ನ್ಯೂಸ್ ಸಿಕ್ಕಿದೆ. ಅದೇನೇ ಇರಲಿ ಒಟ್ಟಾರೆಇವರಿಬ್ಬರ ಸ್ಟಾರ್ ಜೋಡಿಗಳು ಸ್ಕ್ರೀನ್ನಲ್ಲಿ ಮಸ್ತ್ ಮನರಂಜನೆ ಕೊಡೋದಂತೂ ನಿಜ.ಅಂಬರೀಶ್ ಮೇಲಿನ ಅಭಿಮಾನಕ್ಕಾಗಿ ಅಭಿಷೇಕ್ ಅಂಬರೀಶ್ ಜೊತೆ ದರ್ಶನ್ ಗೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಮೊದಲ ಸಿನಿಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಡಿ ಬಾಸ್ ಕಾಣಿಸಿಕೊಳ್ತಿದ್ದಾರಂತೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನು ದರ್ಶನ್ ಯಾವ ರೋಲ್ ನಲ್ಲಿ ಕಮಾಲ್ ಮಾಡ್ತಿದ್ದಾರೆ ಎಂಬುದು ಸದ್ಯ ಕುತೂಹಲಕಾರಿ.
Comments