ಯಶ್ ನೋಡಲೇ ಬೇಕೆಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ...!!!
ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ಜನವರಿ 8ಕ್ಕೆ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಹುಟ್ಟುಹಬ್ಬವನ್ನು ಹೇಗೇಲ್ಲಾ ಮಾಡಬೇಕು ಎಂದು ಪ್ರೀ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಈ ಬಾರಿ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆಯಾಗಿದೆ. ಯಶ್ ಮಾತು ಕೇಳಿ ಫ್ಯಾನ್ಸ್ ಫಾಲೋಯರ್ಸ್ ಬೇಸರ ಮಾಡಿಕೊಂಡಿದ್ದಂತೂ ನಿಜ. ಸ್ಟಾರ್ ಬರ್ತ್ ಡೇ ನ್ನು ದಾಂ ಧೂಂ ಅಂತಾ ಮಾಡಬೇಕು ಅನ್ಕೊಂಡಿದ್ದವರಿಗೆ ಈ ವರ್ಷ ಯಶ್ ಸ್ವಲ್ಪ ಬೇಸರಿಸಿದ್ದಂತೂ ನಿಜ. ಸ್ಟಾರ್ ಯಶ್ ಗೆ ಈ ವರ್ಷ ಒಂದು ಕಡೆ ಸಿಹಿ ಸಿಕ್ಕರೆ ಮತ್ತೊಂದು ಕಡೆ ಕಹಿ ಅನುಭವ ಕೂಡ ಆಗಿದೆ.
ಬೆಂಗಳೂರಿನಲ್ಲಿ ಇಂದು ಭಾರತ್ ಬಂದ್ ಪ್ರಯುಕ್ತ ದೇಶ ವ್ಯಾಪಿ ಸ್ತಬ್ಧವಾಗಿದೆ. ಇದರ ಮಧ್ಯೆ ಯಶ್ ಹುಟ್ಟುಹಬ್ಬ ಬೇರೆ. ಆದರೆ ಈ ಬಾರಿ ರೆಬೆಲ್ ಸ್ಟಾರ್ , ಯಶ್ ಫೇವರೀಟ್ ಸ್ಟಾರ್ ಕೂಡ ಹೌದು. ಅಂಬರೀಶ್ ಅವರ ಸಾವಿನಿಂದ ನಾನು ತುಂಬಾ ಬೇಜಾರಿನಲ್ಲಿದ್ದೇನೆ. ನಾನು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ, ನಾನು ಈ ಬಾರಿ ಬರ್ತ್ ಡೇ ಮಾಡಿಕೊಳ್ಳದೇ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಎಲ್ಲಾ ಅಭಿಮಾನಿಗಳಿಗೆ ಈ ಬಾರಿ ಮನವಿ ಮಾಡಿಕೊಳ್ತಿದ್ದೀನಿ, ಮುಂದಿನ ಬಾರಿ ಖಂಡಿತಾ ನಿಮ್ಮೊಂದಿಗೆ ಆಚರಿಸಿಕೊಳ್ತೀನಿ ಎಂದು ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು. ಈ ವಿಚಾರ ಕೇಳಿದ ಬೆಂಗಳೂರಿನ ಯಶ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಮ್ಮ ಸ್ಟಾರ್ ಬರ್ತ್ ಡೇ ಮಾಡಿಕೊಳ್ಳದೇ, ಅವರನ್ನು ನೋಡಲು ಆಗುವುದಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತದೆ. ಘಟನೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Comments