ಬಾಲಿವುಡ್ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ...!
ಭಾರತದ ಪ್ರಧಾನಿ ನರೇಂದ್ರ ಮೋದಿಯ ಅಲೆ ಇನ್ನು ಕಡಿಮೆಯಾಗಿಲ್ಲ. ನರೇಂದ್ರ ಮೋದಿ ಸಿನಿಮಾದಲ್ಲಿ ನಟಿಸ್ತಾರಂತೆ. ಹೌದಾ...ಅಚ್ಚರಿಯಾಗಬಹುದು. ನರೇಂದ್ರ ಮೋದಿಗೆ ಸ್ಕ್ರೀನ್ ಮೇಲೆ ಕಾಣಿಸ ಬೇಕೆಂಬ ಹಂಬಲವಿತ್ತಾ ಎಂದು ಪ್ರಶ್ನಿಸಬಹುದು. ಆದರೆ ಜಸ್ಟ್ ವ್ಹೇಟ್... ಹೌದು ಪಿಎಂ ನರೇಂದ್ರ ದಾಮೋದರ ಮೋದಿ ಸಿನಿಮಾದಲ್ಲಿ ಕಾಣಿಸ್ತಾ ಇದ್ದಾರೆ. ಶಾಕ್ ಆದ್ರಾ.....ಅಂದಹಾಗೇ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಮೋದಿ ಸಿನಿಮಾದಲ್ಲಿ ಕಾಣಿಸ್ತಾ ಇದ್ದಾರೆ ನಿಜ ಆದರೆ ಅವರೇ ಸಿನಿಮಾದಲ್ಲಿ ನಟಿಸ್ತಾ ಇಲ್ಲ. ವಿವೇಕ್ ಒಬೆರಾಯ್ ರೂಪದಲ್ಲಿ.
ನಟ ಒಬೆರಾಯ್ ಅವರು ಪ್ರಧಾನ ಮಂತ್ರಿ ಅವರ ಜೀವಾನಾಧರಿತ ಸಿನಿಮಾ "ಪಿಎಂ ನರೇಂದ್ರ ಮೋದಿ"ಯಲ್ಲಿ ಮೋದಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅದಕ್ಕಾಗಿ ತಮ್ಮ ಲುಕ್ಕನ್ನೇ ಬದಲಿಸಿಕೊಂಡಿರುವ ಅವರು ಟೈಟಲ್ ಕಾರ್ಡ್ ನಲ್ಲಿ "ವಿವೇಕ್ ಆನಂದ್ ಒಬೆರಾಯ್" ಎಂದು ಪೂರ್ತಿ ಹೆಸರು ಹಾಕಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಚಿತ್ರದ ಫಸ್ಟ್ ಲುಕ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಸುರೇಶ್ ಒಬೆರಾಯ್-ಸಂದೀಪ್ ಸಿಂಗ್ ನಿರ್ಮಾಣ, ಒಮಂಗ್ ಕುಮಾರ್ ಬಿ. ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಜನವರಿ ಕೊನೇ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಇತ್ತೀಚಿಗೆ ಪ್ರೇಮ್ ಮಿನಿಸ್ಟರ್ ಆಧಾರಿತ ಸಿನಿಮಾಗಳು ಹೆಚ್ಚಾಗಿದ್ದು, ಅದಾಗಲೇ ಮೋದಿಗಿಂತ ಹಿಂದೆ ಇದ್ದ ಪ್ರೈಮ್ ಮಿನಿಸ್ಟರ್ ಮನಮೋಹನ್ ಸಿಂಗ್ ಜೀವನಾಧಾರಿತ ಸಿನಿಮಾವು ಕೂಡ ಭರ್ಜರಿಯಾಗಿ ಮೂಡಿ ಬರುತ್ತಿದೆ. ಈಗಾಗಲೇ ಬಾಲಿವುಡ್ನಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದು, ಇದೀಗ ಮೋದಿ ಸಿನಿಮಾ ಕೂಡ ಸೈಡ್ನಲ್ಲಿ ಸ್ಟಂಟ್ ಕೊಡೋಕೆ ರೆಡಿಯಾಗ್ತಿದೆ.
Comments