ಭರ್ಜರಿ ಆಫರ್ ಗಿಟ್ಟಿಸಿಕೊಂಡ ಟಗರು ಪುಟ್ಟಿ : ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ...!

ಕನ್ನಡ ಸಿನಿಮಾ ಲೋಕದಲ್ಲಿ ಟಗರು ಸಿನಿಮಾ ಒಂದು ದಾಖಲೆ ಬರೆದಿದ್ದಂತೂ ನಿಜ. ಸಿನಿಮಾದಲ್ಲಿ ನಟಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಟಗರು ಚಿತ್ರ ಆಡಿಯೋ ಸೂಪರ್ ಹಿಟ್ ಆಗಿ ಹೊರ ಭಾಷೆಗಳ ಡೈರೆಕ್ಟರ್ ಗಳು ಇತ್ತ ನೋಡುವುದನ್ನು ಮಾಡಿದ ಸಿನಿಮಾ ಅಂದ್ರೆ ತಪ್ಪಾಗಲ್ಲ, ಡಾಲಿ ಧನಂಜಯ, ಪುಟ್ಟಿ ಮಾನ್ವಿತಾ, ಚಿಟ್ಟೆ ವಶಿಷ್ಟ ಗೆ ಬ್ರೇಕ್ ಸಿಕ್ಕಿದಂತೂ ನಿಜ. ಡಾಲಿ ಧನಂಜಯ ಆಗಲೀ, ವಶಿಷ್ಟ ಆಗಲಿ, ಮಾನ್ವಿತಾಗಾಗಲೀ ಸಿನಿಮಾ ಸಿಕ್ಕಾಪಟ್ಟೆ ಅದೃಷ್ಟ ಕೊಟ್ಟಿದ್ದಂತೂ ಸುಳ್ಳಲ್ಲ. ಅಂದಹಾಗೇ ಸಿನಿಮಾದಲ್ಲಿ ಶಿವಣ್ಣನ ಜೋಡಿಯಾಗಿ ನಟಿಸಿದ ಮಾನ್ವಿತಾಗೆ ಅದೃಷ್ಟದ ಅವಕಾಶಗಳು ಹುಡುಕಿಬಂದವು.
ಖ್ಯಾತ ನಿರ್ದೇಶಕ ರಾಜಮೌಳಿ ಅವರು ಈಗಾಗಲೇ ಮಾನ್ವಿತಾಳನ್ನು ತಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇವೆಂದು ಅದಾಗಲೇ ಅಡ್ವಾನ್ಸ್ ಕೊಟ್ಟಿದ್ದಾರೆ. ಸದ್ಯ ಕನ್ನಡದ ಪುಟ್ಟಿ ಬಾಲಿವುಡ್ಗೆ ಹಾರಿದ್ದಾಳೆ. ಈಗಾಗಲೇ ಮುಂಬೈನಲ್ಲೇ ಹೊಸತೊಂದು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ ಮುಂಬೈನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಅವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು. ಒಂದೊಳ್ಳೆ ಬ್ಯಾನರ್ ಜತೆಗೆ ಸ್ಟಾರ್ ನಟರ ಸಿನಿಮಾದ ಮೂಲಕವೇ ಬಿಟೌನ್‌ಗೆ ಪ್ರವೇಶ ಪಡೆಯಬೇಕೆನ್ನುವ ಅವರ ಮಹತ್ವಾಕಾಂಕ್ಷೆಯ ಕಾರಣಕ್ಕೆ ಅದು ತಡವಾಗುತ್ತಿದೆ ಎನ್ನುತ್ತಿವೆ ಮೂಲಗಳು. ಮಾನ್ವಿತಾ ಅವರು ಬಾಲಿವುಡ್ನಲ್ಲಿ ಬೆಳೆಯಲೀ, ಕನ್ನಡದ ಸಿನಿಮಾ ನಟಿ ಹಿಂದಿ ಚಿತ್ರೋದ್ಯಮದಲ್ಲಿ ಭರವಸೆಯ ನಾಯಕಿಯಾಗಿ ಬೆಳೆಯಲೀ ಎಂಬುದು ನಮ್ಮೆಲ್ಲರ ಆಶಯ. ಕನ್ನಡದಿಂದ ಬಾಲಿವುಡ್ಗೆ ಹಾರಿದ ಮಾನ್ವಿತಾ, ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸಲು ಕನ್ಫರ್ಮ್ ಆಗಿದೆ. ಸಂಭಾವನೆ ಬಗ್ಗೆ ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಭಾರೀ ಮಾತಾಗಿದ್ದು ಎಷ್ಟು ತೆಗೆದುಕೊಳ್ತಾರಾ ಎಂಬ ಮಾಹಿತಿ ಬಂದಿಲ್ಲ.
Comments