`ರಾಕಿ ಭಾಯ್' ಗೆ ಹುಟ್ಟುಹಬ್ಬದ ಸಂಭ್ರಮ…!! ಯಶ್ @ 33

ಸ್ಯಾಂಡಲ್ ವುಡ್ ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ ಮೂರು ದಿನಗಳ ಐಟಿ ರೈಡ್ ನಂತರ ಟಾಪ್ ಸ್ಟಾರ್ ಗಳು ಕೊಂಚ ರಿಲೀಫ್ ಆಗಿದ್ದಾರೆ. ಯಾವ ಶೂಟಿಂಗ್ ಗೂ ಹೋಗದೇ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಾ ಮನೆಯಲ್ಲಿ ಕುಳಿತಿದ್ದ ಶಿವಣ್ಣ, ಯಶ್ , ಪುನೀತ್ ಸುದೀಪ್ ಇದೀಗ ಶೂಟಿಂಗ್ ನತ್ತ ಬ್ಯುಸಿ ಆಗಿದ್ದಾರೆ. ಒಂದು ಕಡೆ ಯಶ್ ಸಿನಿಮಾ ಕೆಜಿಎಫ್ ಭರ್ಜರಿ ಹಿಟ್ ಆಗಿದೆ. ಮತ್ತೊಂದು ಕಡೆ ಹುಟ್ಟುಹಬ್ಬದ ಸಂಭ್ರಮ. ಆದರೆ ಯಶ್ ಸಿನಿಮಾ ಯಶಸ್ವಿಯಾಗಿದ್ದರೂ ಬೇಸರದಲ್ಲಿದ್ದಾರೆ. ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ..
ಇಂದು ಯಶ್ 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಯಶ್ ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳು ಇಂದು ಸೋಶಿಯಲ್ ಮೀಡಿಯಾದಲ್ಲಿ ಯಶ್ ಫೋಟೋ ಹಾಕುವುದರ ಮೂಲಕ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಸೋಮವಾರ ಯಶ್, ಈ ವರ್ಷ ಜನ್ಮದಿನ ಆಚರಿಸುತ್ತಿಲ್ಲ. ಅಭಿಮಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ನಮ್ಮಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಶ್ ಅವರು ಕೆಲ ದಿನಗಳ ಹಿಂದಷ್ಟೇ ನಮ್ಮನ್ನ ಅಗಲಿದ್ದಾರೆ ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ..ಈ ಮೂಲಕ ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Comments