ಪ್ಲೀಸ್... ಈ ಬಾರಿ ನನ್ನ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಬೇಡಿ...!!!
ನಟ ಯಶ್ ಹುಟ್ಟುಹಬ್ಬ ನಾಳೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ ಮೂರು ದಿನಗಳ ಐಟಿ ರೈಡ್ ನಂತರ ಟಾಪ್ ಸ್ಟಾರ್ ಗಳು ಕೊಂಚ ರಿಲೀಫ್ ಆಗಿದ್ದಾರೆ. ಯಾವ ಶೂಟಿಂಗ್ ಗೂ ಹೋಗದೇ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಾ ಮನೆಯಲ್ಲಿ ಕುಳಿತಿದ್ದ ಶೀವಣ್ಣ, ಯಶ್ , ಪುನೀತ್ ಸುದೀಪ್ ಇದೀಗ ಶೂಟಿಂಗ್ ನತ್ತ ಬ್ಯುಸಿ ಆಗಿದ್ದಾರೆ. ನಿನ್ನೆಯಷ್ಟೇ ನಿರಾಳವಾಗಿದ್ದಾರೆ ಕನ್ನಡ ಚಿತ್ರರಂಗದ ನಟರು. ನಾಳೆ , ಜನವರಿ 8 ರಾಕಿಂಗ್ ಸ್ಟಾರ್ ಹುಟ್ಟುಹಬ್ಬ. ಒಂದು ಕಡೆ ಯಶ್ ಸಿನಿಮಾ ಕೆಜಿಎಫ್ ಭರ್ಜರಿ ಹಿಟ್ ಆಗಿದೆ. ಮತ್ತೊಂದು ಕಡೆ ಹುಟ್ಟುಹಬ್ಬದ ಸಂಭ್ರಮ. ಆದರೆ ಯಶ್ ಸಿನಿಮಾ ಯಶಸ್ವಿಯಾಗಿದ್ದರೂ ಬೇಸರದಲ್ಲಿದ್ದಾರೆ.
ಈಗಾಗಲೇ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲು ತಯಾರಿ ಮಾಡಿಕೊಂಡಿದ್ದರು. ಆದರೆ ಸ್ಯಾಂಡಲ್’ವುಡ್ ನ ಹಿರಿಯ ಕಲಾವಿದ ರೆಬೆಲೆ ಸ್ಟಾರ್ ಅಂಬರೀಶ್ ಅವರ ಸಾವಿನಿಂದ ಯಶ್,ಈ ಬಾರಿ ಬರ್ತ್ ಡೇ ಮಾಡಿಕೊಳ್ಳುತ್ತಿಲ್ಲವಂತೆ. ಈ ಬಾರಿ ನಾನು ಅಂಬಿಯಣ್ಣನ ಸಾವಿನಿಂದ ಬೇಸರದಲ್ಲಿದ್ದೇನೆ, ಈ ನಡುವೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸಿಲ್ಲವೆಂದಿದ್ದಾರೆ. ಎಲ್ಲಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿರುವ ಯಶ್, ನನಗೆ ನನ್ನ ಫ್ಯಾನ್ಸ್ ಮೇಲೆ ಅಭಿಮಾನವಿದೆ. ಅವರ ಮೇಲೆ ಗೌರವವಿದೆ. ಅವರ ಪ್ರೀತಿ , ಅಭಿಮಾನ ಸದಾ ನನ್ನ ಮೇಲಿದೆ. ಈ ಬಾರಿ ನಿರೇಶರಾಗಬೇಡಿ. ನಾನು ಅಂಬಿಯಣ್ಣನಿಉಗೆ ಸಲ್ಲಿಸುವ ಗೌರವವಿದು ಎಂದಿದ್ದಾರೆ.
Comments