ರೈಡ್ ಬಳಿಕ ಯಶ್, ರಾಧಿಕಾ ಬಳಿ ಹೋಗಿದ್ಯಾಕೆ...?

ಸ್ಯಾಂಡಲ್’ವುಡ್ ನ ಕೆಲ ನಂ.1 ಸ್ಟಾರ್ ಗಳ ಪೈಕಿ ಯಶ್, ಮನೆ ಮೇಲೂ ಕೂಡ ಐಟಿ ರೈಡ್ ಆಗಿತ್ತು. ಇಂದು ಅಧಿಕಾರಿಗಳ ತಪಾಸಣೆ ಬಳಿಕ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಕಿಂಗ್ ಸ್ಟಾರ್ ಅವರು, ನಿರ್ಮಾಪಕ ವಿಜಯ್ ಕಿರಗಂದೂರು, ತಿಮ್ಮೇಗೌಡ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಹಾಗಂತಾಕೆಜಿಎಫ್ ಸಿನಿಮಾ ಉದ್ದೇಶಕ್ಕಾಗಿ ಈ ರೈಡ್ ನಡೆದಿಲ್ಲ, ಸುಖಾ ಸುಮ್ಮನೇ ಏನೇನೋ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಿಂದ ಬೇಸರವಾಗಿದೆ ಎಂದರು.ಎರಡು ದಿನ ಮನೆಯಲ್ಲೇ ಇರಬೇಕಾಗಿದ್ದರಿಂದ ರಾಧಿಕಾ ಮತ್ತೆ ಮಗುವನ್ನು ನನಗೆ ಬಿಟ್ಟು ಇರಲು ಕಷ್ಟವಾಯಿತು. ಅಲ್ಲದೇ ಮಗುವಿಗೆ ಸ್ನಾನ ಮಾಡಿಸಬೇಕೆಂದು ಅಮ್ಮ ಚಿಂತೆಯಲ್ಲಿದ್ದರು. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ನಾವು ಕೂಡ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದರು. ಅವರಿಗೆ ಸಹಕರಿಸಿದ್ದೇವೆ.
ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಪ್ರೋಸಿಜರ್ ಮಾಡಿದ್ದಾರೆ. ಕೆಲವು ಉಹಾಪೋಹಾಗಳನ್ನು ಮಾಡಬೇಡಿ. ಕೆಲವರು ಇಂತಹ ಅವಕಾಶಕ್ಕಾಗಿ ಕಾಯುಕೊಂಡು ಇರುತ್ತಾರೆ. ಊಹಾಪೋಹಗಳ ಮೇಲೆ ಕೆಲ ಮಾಧ್ಯಮಗಳು ವರದಿ ಬಿತ್ತರಿಸಿವೆ ಎಂದು ಅಸಮಾಧಾನ ಹೊರಹಾಕಿದರು. ಒಟ್ಟಾರೆ ಇಂದು ಬಹುತೇಕವಾಗಿ ಯಶ್ ಮನೆಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಸಿನಿಮಾಗೆ ಸಂಬಂಧಿಸಿದ ಸಂಭಾವನೆಯ ಕೆಲ ದಾಖಲಾತಿಗಳನ್ನು ಪಡೆದು ಹಿಂದಿರುಗಿದ್ದಾರೆ. ಜೊತೆಗೆ ಯಶ್ ಮನೆಯಲ್ಲಿ ಸಿಕ್ಕ ಕೆಲ ಚಿನ್ನಾಭರಣಗಳನ್ನು, ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.
ನೊಟಿಸ್ ನೀಡಿದ್ದಾರೆ. ಅವರು ಕರೆದಾಗ ನಾನು ವಿಚಾರಣೆಗೆ ಹೋಗುತ್ತೇನೆ. ಯಾವ ಭಯವಿಲ್ಲ,ಎಲ್ಲವು ನ್ಯಾಯಯುತವಾಗಿದೆ. ನಿಮ್ಮಷ್ಟೇ ಶಾಕ್ ಫಸ್ಟ್ ನನಗೂ ಆಗಿತ್ತು. ಇದೀಗ ಎಲ್ಲವೂ ಸರಿಯಿದೆ ಎಂದಿದ್ದಾರೆ.ರೈಡ್ ಬಳಿಕ ಫಸ್ಟ್ ನಾನು ರಾಧಿಕಾ ಮತ್ತು ಮಗುವನ್ನು ನೋಡಲು ಹೋಗಿದ್ದೆ. ಆ ನಂತರ ನಟ ಸಾರ್ವಭೌಮ ಆಡಿಯೋ ಲಾಂಚ್ ಗೆ ಇನ್ವೈಟ್ ಮಾಡಿದ್ದಾರೆ. ಅಲ್ಲಿಗೆ ಹೋಗುತ್ತಿದ್ದೇನೆ ಎಂದರು.
Comments