ಯಶ್ ಮಹಾಲಕ್ಷ್ಮಿಯ ಮೈ ಮೇಲಿದ್ದ ಚಿನ್ನ ಸದ್ಯ ಐಟಿ ಅಧಿಕಾರಿಗಳ ಕೈಯಲ್ಲಿ...!!!
ಕೊನೆಗೂ ಸ್ಟಾರ್’ಗಳ ಮನೆಯಲ್ಲಿ ಐಟಿ ರೈಡ್ ಅಂತ್ಯವಾಗಿದೆ. ಇತ್ತ ರಾಕಿಂಗ್ ಸ್ಟಾರ್ ನಿವಾಸದಲ್ಲಿ 90% ಐಟಿ ಅಧಿಕಾರಿಗಳ ತಪಾಸಣೆ ಮುಗಿದಂತಿದೆ. ಯಶ್ ಮಾವನಮನೆ [ರಾಧಿಕಾ ಪಂಡಿತ್ ತಂದೆಯ ಮನೆ] ಯಲ್ಲಿಯೂ ಐಟಿ ರೈಡ್ ಇಂದು ಮುಕ್ತಾಯವಾಗಿದೆ. ನಿನ್ನೆ ರೈಡ್ ಮಾಡಿದ ಬಳಿಕ ಕೆಲವು ಮಾಹಿತಿ ಸಂಗ್ರಹಿಸಲು ರಾಧಿಕಾ ತಂದೆಯನ್ನು ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಬಳಿಕ ವಾಪಸ್ ಮನಗೆ ಬಿಟ್ಟು ಹೋಗಿದ್ದರು. ಇಂದು ಮನೆಯಲ್ಲಿ ಸಿಕ್ಕ ಕೆಲ ದಾಖಲೆಗಳನ್ನು ಸಂಗ್ರಹಿಸಿ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಅಧಿಕಾರಿಗಳು ರಾಧಿಕಾ ಪಂಡಿತ್ ಬಳಿಯೂ ವಿಚಾರಣೆ ನಡೆಸಿದ್ದರಂತೆ ಆರೋಗ್ಯದ ದೃಷ್ಟಿಯಿಂದ ರಾಧಿಕಾ ಅವರನ್ನು ಹೆಚ್ಚಿನದಾಗಿ ವಿಚಾರಣೆ ನಡೆಸಲಿಲ್ಲ ಎನ್ನಲಾಗಿದೆ.
ಐಟಿ ಅಧಿಕಾರಿಗಳು ಶುಕ್ರವಾರ ತಡರಾತ್ರಿ ರಾಧಿಕಾ ತಂದೆ ಮನೆಯಿಂದ ತೆರಳಿದ್ದಾರೆ. ಅಧಿಕಾರಿಗಳು ಒಂದು ಸೂಟ್ ಕೇಸ್ ನಲ್ಲಿ ದಾಖಲೆಗಳು ಹಾಗೂ ಒಂದು ಬ್ಯಾಗ್ ನಲ್ಲಿ ಜ್ಯುವೆಲ್ಲರಿ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಜಪ್ತಿ ಮಾಡಿರುವ ವಸ್ತುಗಳು ಮತ್ತು ದಾಖಲೆಗಳ ಕುರಿತಾಗಿ ಅಧಿಕಾರಿಗಳು ರಿಪೋರ್ಟ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಯಶ್ ಮನೆಯಲ್ಲಿರುವ ಶೋಧಕಾರ್ಯ ಮುಂದುವರೆಸಿದ್ದಾರೆ. ಮಧ್ಯಾಹ್ನದ ವೇಳೆಗೆ ಬಹುತೇಕ ತಪಾಸಣೆ ಮುಗಿಯಲಿದ್ದು ಅಧಿಕಾರಿಗಳು ವಾಪಸ್ ಆಗಲಿದ್ದಾರೆ. ನಿನ್ನೆ ಯಶ್ ಮನೆಯಲ್ಲಿ ಮೂರು ಬ್ಯಾಗ್ಗಳಲ್ಲಿ ಕೆಲ ಮಾಹಿತಿಗಳ ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಇಂದು ಶಿವರಾಜ್ ಕುಮಾರ್ ಮನೆಯಲ್ಲಿ ಐಟಿ ರೈಡ್ ಅಂತ್ಯವಾಗಿದೆ. ಪುನೀತ್ ರಾಜ್ ಕುಮಾರ್ ಮತ್ತು ಶಿವಣ್ಣ ಐಟಿ ರೈಡ್ ಅಂತ್ಯದಿಂದ ನಿಟ್ಟುಸಿರು ಬಿಟ್ಟಿದಂತಿದೆ. ಇಂದು ಕೂಡ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ರೈಡ್ ಶೋಧಕಾರ್ಯ ಮುಂದುವರೆದಿದೆ.
Comments