ರಾಕ್'ಲೈನ್ ಮನೆಯಲ್ಲಿ ಸಿಕ್ತು ರಾಶಿ ರಾಶಿ ಹಣ : ಬೆಚ್ಚಿಬಿದ್ದ ಐಟಿ ರೈಡರ್ಸ್..!!!

ಸ್ಯಾಂಡಲ್ ವುಡ್ ಸ್ಟಾರ್ ನಟರ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿದ್ದ ಬೆನ್ನಲ್ಲೇ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಮೇಲ್ನೋಟಕ್ಕೆ ಇದೆಲ್ಲಾ ಸರ್ಕಾರದ ಕ್ರಮಗಳು ಎನಿಸಿದರೂ ಇದರ ಹಿಂದೆ ಬ್ಲ್ಯಾಕ್ ಮನಿಯ ವಾಸನೆ ಬರುತ್ತಿದೆ. ಏಕಕಾಲದಲ್ಲಿಯೇ ಕನ್ನಡದ ಮೋಸ್ಟ್ ಟಾಪೆಸ್ಟ್ ನಾಯಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ಪೈಕಿ ದಿ ವಿಲನ್, ನಟ ಸಾರ್ವಭೌಮ, ಕೆಜಿಎಫ್ ಸಿನಿಮಾ ನಿರ್ಮಾಪಕರಿಗೆ ಗ್ರಹಾಚಾರ ಬೆನ್ನತ್ತಿದಂತಿದೆ. ಈಗಾಗಲೇ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ವಿಚಾರಣೆ ಕಾರ್ಯ ಮುಂದುವರೆಸಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್ ಅವರ ಮನೆ ಮೇಲೆ ಐಟಿ ರೈಡ್ ಆಗಿದ್ದು,ಇಂದೂ ಕೂಡ ಅಧಿಕಾರಿಗಳು ರಾಕ್ ಲೈನ್ ವೆಂಕಟೇಶ್ ಅವರ ಮನೆ ಮೇಲೆ ಎರಡನೇ ಬಾರಿ ದಾಳಿ ನಡೆಸಿದ್ದಾರೆ. ನಟ-ನಿರ್ಮಾಪಕರ ಮನೆಯಲ್ಲಿ ವಶಪಡಿಸಿಕೊಂಡಿದ್ದ ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.ನಿನ್ನೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ತಡರಾತ್ರಿ 11 ಗಂಟೆಯವರೆಗೂ ಪರಿಶೀಲನೆ ನಡೆಸಿದ್ದರು, ಇಂದೂ ಕೂಡ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಸುಮಾರು 180 ಕೋಟಿಯಷ್ಟು ಆಸ್ತಿಪತ್ರಗಳು ದೊರೆತಿದ್ದವು. ಅಲ್ಲದೇ ಸುಮಾರು 5 ಕೆ.ಜಿಯಷ್ಟು ಚಿನ್ನಾಭರಣ 40 ಲಕ್ಷ ಹಾರ್ಡ್ ಕ್ಯಾಶ್ ಕೂಡ ರಾಕ್ ಲೈನ್ ಮನೆಯಲ್ಲಿ ದೊರೆತಿತ್ತು. ಇದಕ್ಕೆ ತಮ್ಮ ಬಳಿ ದಾಖಲೆಗಳಿವೆ ಎಂದು ವೆಂಕಟೇಶ್ ಅವರು ಹೇಳಿದ್ದಾರೆ ಎನ್ನಲಾಗಿದೆ.ಆದರೆ ಈ ಸಂಪತ್ತಿಗೆ ನಮ್ಮ ಹತ್ತಿರ ದಾಖಲೆಗಳಿವೆ. ಅಷ್ಟೇ ಅಲ್ಲಾ ಸರ್ಕಾರಕ್ಕೆ ಸಂಬಂಧಿಸಿದಂತೇ ತೆರಿಗೆ ಆದಾಯವನ್ನು ಕೂಡ ನಾವು ಕಟ್ಟುತ್ತಿದ್ದೇವೆ ಎಂದಿದ್ದಾರೆ. ಭಯಪಡುವ ಅಗತ್ಯವಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಲೀ, ನಾವು ಅವರಿಗೆ ಸಹಕರಿಸುತ್ತೇವೆ ಎಂದಿದ್ದಾರೆ.
Comments