ಬಾಣಂತಿ ರಾಧಿಕಾ ಪಂಡಿತ್ ಅವರನ್ನು ಬಿಟ್ಟಿಲ್ಲ ಐಟಿ ಅಧಿಕಾರಿಗಳು!!!



ಕನ್ನಡ ಸಿನಿಮಾ ರಂಗದ ಕೆಲ ಸೂಪರ್ ಸ್ಟಾರ್ಸ್ ನಿವಾಸಗಳ ಮೇಲೆ ನಿನ್ನೆಯಷ್ಟೇ ಐಟಿ ರೈಡ್ ನಡೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಯಶ್, ಸುದೀಪ್ ಅವರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ತನಿಖಾ ಕಾರ್ಯ ಮುಂದುವರೆಸಿದ್ದಾರೆ. ಈ ಮಧ್ಯೆ ಸಿನಿಮಾ ಶೂಟಿಂಗ್ಗೆಂದು ಹೋಗಿದ್ದ ಸುದೀಪ್ ಅವರು ವಾಪಸ್ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರನ್ನು ಟಗರು ಸಿನಿಮಾಕ್ಕಾಗಿ ಎಷ್ಟು ಸಂಭಾವನೆ ತೆಗೆದುಕೊಂಡಿದ್ದೀರಿ ಎಂದು ಕೂಡ ಅಧಿಕಾರಿಗಳು ಪ್ರಶ್ನಿಸಿದ್ದಾರೆ.ಮಹಿಳಾ ಐಟಿ ಅಧಿಕಾರಿಗಳು ಕೂಡ ಗೀತಾ ಶಿವರಾಜ್ ಕುಮಾರ್ ಅವರಿಂದ ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಯಶ್ ಅವರ ಮಾವನ ಮನೆ ಮೇಲೂ ಐಟಿ ರೈಡ್ ಆಗಿದ್ದು ಅಧಿಕಾರಿಗಳು ಜೊತೆಯಲ್ಲಿಯಿಯೇ ರಾಧಿಕಾ ಪಂಡಿತ್ ಅವರ ತಂದೆಯನ್ನು ಕರೆದುಕೊಂಡು ಹೋಗಿದ್ದರು. ಬಳಿಕ ಮನೆಗೆ ವಾಪಸ್ ಕರೆ ತಂದಿದ್ದಾರೆ. ಈ ನಡುವೆ ಬಾಣಂತನಕ್ಕಾಗಿ ತವರು ಮನೆಯಲ್ಲಿದ್ದ ರಾಧಿಕಾ ಪಂಡಿತ್ ಗೂ ಐಟಿ ಶಾಕ್ ನೀಡಿದೆ. ಅಧಿಕಾರಿಗಳು ನಟಿ ರಾಧಿಕಾ ಪಂಡಿತ್ ಅವರನ್ನು ಕೂಡ ಪ್ರಶ್ನಿಸಿದ್ದರೆನ್ನಲಾಗಿದೆ. ತಾನು ಬಾಣಂತನಕ್ಕಾಗಿ ತಮರು ಮನೆಯಲ್ಲಿದ್ದೇನೆ, ನನ್ನನ್ನಆರೋಗ್ಯದ ದೃಷ್ಟಿಯಿಂದ ನಾನು ಯಾವ ಮಾಹಿತಿಯನ್ನು ಕೊಡಲಾರೆ ಎಂದಿದ್ದಾರೆ. ಅಧಿಕಾರಿಗಳು ರಾಧಿಕಾ ಮಾತಿಗೆ ಒಪ್ಪಿ ಹಿಂದಿರುಗಿದ್ದಾರೆ ಎನ್ನಲಾಗಿದೆ. ಇನ್ನು ಶಿವರಾಜ್ ಕುಮಾರ್ ಸೇರಿದಂತೇ ಸುದೀಪ್, ಯಶ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಿಜಯದ ಕಿರಗಂದೂರು ಸೇರಿದಂತೇ ಅನೇಕರಿಗೆ ಐಟಿ ಶಾಕ್ ನೀಡಿದೆ. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಿದ ನಟರು ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸಲಿ, ನಾವು ಸಹಕಾರ ನೀಡುತ್ತೇವೆ. ನಾವು ಯಾವುದಕ್ಕು ಹೆದರುವುದಿಲ್ಲ. ನಮ್ಮಲ್ಲಿನ ಆಸ್ತಿಯ ವಿವರ ನ್ಯಾಯಯುತವಾಗಿದೆ ಎಂದಿದ್ದಾರೆ. ಸ
ಸಿನಿಮಕ್ಕಾಗಿ ಹೆಚ್ಚು ಸಂಭಾವನೆ ಪಡೆದು, ಸರ್ಕಾರಕ್ಕೆ ಕಡಿಮೆ ಮೊತ್ತದ ತೆರಿಗೆ ಕಟ್ಟುತ್ತಿದ್ದಾರೆ ಎಂಬ ಮಾಹಿತಿ ಮೇರೆ ಐಟಿ ಅಧಿಕಾರಿಗಳು ದಿಢೀರ್ ಅಂತಾ ದಾಳಿ ನಡೆಸಿದ್ದರೆನ್ನಲಾಗಿದೆ. ಇನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಮತ್ತಷ್ಟು ಸಿನಿಮಾ ಸ್ಟಾರ್ ಗಳ ಮೇಲೂ ಐಟಿ ಗಾಳ ಬೀಸಲಿದೆ ಎಂಬ ಗುಪ್ತ ಮಾಹಿತಿ ಹರಿದಾಡುತ್ತಿದೆ.
Comments