ಸ್ಯಾಂಡಲ್’ವುಡ್ ಸ್ಟಾರ್ ನಿವಾಸಗಳ ಮೇಲೆ ದಿಢೀರ್ ಐಟಿ ದಾಳಿ : ಬೆಚ್ಚಿಬಿದ್ರಾ ಸ್ಟಾರ್ ನಟರು…!!!
ದಿಢೀರ್ ಅಂತಾ ಇಂದು ಬೆಳಿಗ್ಗೆ ಸ್ಯಾಂಡಲ್ ‘ವುಡ್'ನ ಕೆಲ ಸ್ಟಾರ್’ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್ ಸೇರಿದಂತೇ ರಾಕಿಂಗ್ ಸ್ಟಾರ್ ನಟ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೂ ಐಟಿ ರೈಡ್ ಆಗಿದೆ.ವಿಜಯ್ ಕಿರಂಗದೂರು, ಮನೋಹರ ಮನೆ ಮೇಲೆ ಬೆಳ್ಳಂಬೆಳ್ಳಗೆ ಐಟಿ ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ನಾಲ್ವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ನಿವಾಸಮಾನ್ಯತ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್, ಜೆಪಿ ನಗರದಲ್ಲಿರುವ ಸುದೀಪ್, ನಾಗರಭಾವಿಯಲ್ಲಿರುವ ನಿರ್ಮಾಪಕ ವಿಜಯ್ ಕಿರಗಂದೂರು ಮನೆ ಸೇರಿದಂತೆ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ರಾಕ್ ಲೈನ್ ಹಾಗೂ ಮನೋಹರರ್ ಅವರ ಮನೆ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು ಇಡೀ ಸ್ಯಾಂಡಲ್’ವುಡ್ ಸ್ಟಾರ್’ಗಳನ್ನು ಬೆಚ್ಚಿ ಬೀಳಿಸಿದೆ. ಇನ್ನು ಕನ್ನಡಡ ಚಿತ್ರರಂಗದ ಯಾವ ಸ್ಟಾರ್ಗಳ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ಕಣ್ಣು ನೆಟ್ಟುತ್ತೋ ಕಾದು ನೋಡಬೇಕಿದೆ.
Comments