‘ಬುಲ್ ಬುಲ್ ಬೆಡಗಿ’ಗೆ ಹುಡುಗ ಬೇಕಂತೆ : ಯಾರಾದ್ರು ಇದ್ದೀರಾ…!!!
ನಟಿ ರಚಿತಾರಾಂ ಸದ್ಯ ಸ್ಯಾಂಡಲ್’ವುಡ್ ನ ಬಹುಬೇಡಿಕೆ ನಾಯಕಿ. ಡಿಂಪಲ್ ಕ್ವೀನ್ ರಚ್ಚು ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳು, ಈ ನಡುವೆ ಸೀತಾರಾಮ ಕಲ್ಯಾಣ ಸಿನಿಮಾದ ಆಡಿಯೋ ಸೂಪರ್ ಹಿಟ್ ಆಗಿದ್ದರ ಖುಷಿ. ಒಂದು ಕಡೆ ಪ್ರೊಫೇಷನಲೀ ಲೈಫ್’ನ ಎಂಜಾಯ್ ಮಾಡುತ್ತಿರುವ ಗುಳಿಕೆನ್ನೆಯ ಚೆಲುವೆ, ಪರ್ಸನಲಿ ಲೈಫ್ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲಾ ಅಭಿಮಾನಿಗಳಿಗೆ ಗುಡ್ನ್ಯೂಸ್’ವೊಂದನ್ನು ಕೊಟ್ಟಿದ್ದಾರೆ. ಅಂದಹಾಗೇ ತಮ್ಮ ಮದುವೆ ಬಗ್ಗೆ ಗುಟ್ಟು ಬಿಡಕೊಡದ ಸ್ಯಾಂಡಲ್’ವುಡ್ ಚೆಲುವೆ ಹೇಳಿದ್ದೇನು ಗೊತ್ತಾ…? ನಾನು ಸಿಂಗಲ್ ಆಗೀರೋದು ಯಾರಿಗೂ ಇಷ್ಟವಿಲ್ಲ ಅನಿಸುತ್ತೆ. ಅದಕ್ಕೆ ನಾನು ಬಂದಕಡೆ ಹೋದಕಡೆ ಎಲ್ಲರು ನನ್ನ ಮದುವೆ ಬಗ್ಗೆಯೇ ವಿಚಾರಿಸುತ್ತಾರೆ. ಜೊತೆಗೆ ಒಂದಷ್ಟು ಗಾಸಿಪ್’ಗಳು ಬೇರೆ. ಇದಕ್ಕೆಲ್ಲ ಬ್ರೇಕ್ ಹಾಕಲು ತೀರ್ಮಾನಿಸಿದ್ದೇನೆ.
ಈ ಬಾರಿ ನಾನು ನಿಮ್ಮೊಂದಿಗೆ ವಿಚಾರವೊಂದನ್ನು ಪ್ರಸ್ತಾಪಿಸುತ್ತಿದ್ದೇನೆ. ಎಲ್ಲರು ಮದುವೆ ಬಗ್ಗೆ ಕೇಳ್ತಾ ಇದ್ರಿ, ನಾನು ಕೂಡ ನೋಡೋಣ ಅಂತಿದ್ದೆ. ಆದರೆ ಈ ವರ್ಷ ಹಾಗೇ ಮಾಡುವುದಿಲ್ಲ. ನಾನು ಮದುವೆಯಾಗಲೂ ಸಿದ್ಧವಾಗಿದ್ದೇನೆ. ಜೊತೆಗೆ ನಿಮಗೊಂದು ಕೆಲಸ ಕೂಡ ಕೊಟ್ಟಿದ್ದೇನೆ ಎಂದಿದ್ದಾರೆ. ಅಂದಹಾಗೇ ಅವರು ತಮ್ಮನ್ನು ಮದುವೆಯಾಗುವ ತಕ್ಕುದಾದ ವರನನ್ನು ನೀವೆ ಹುಡುಕಿಕೊಡಿ ಎಂದಿದ್ದಾರೆ. ಇದೇನು ತಮಾಷೆ ಅನ್ಕೊಂಡ್ರಾ…ಖಂಡಿತಾ ಇಲ್ಲಾ ರೀ.. ರಚ್ಚು ಸೀರಿಯಸ್ ಆಗಿಯೇ ಈ ಮಾತು ಹೇಳಿದ್ದಾರೆ. ರಚಿತಾರಾಂ ಮಾಧ್ಯಮದವರ ಮುಂದೆ, ಬಂದಾಗಲೆಲ್ಲಾ ಸಿನಿಮಾ ನಟನೆ ಬಗ್ಗೆ ಚರ್ಚಿಸುವುದಕ್ಕಿಂತ ಅವರ ಮದುವೆ ಬಗ್ಗೆಯೇ ಹೆಚ್ಚು ಪ್ರಸ್ತಾಪವಾಗುತ್ತಿತ್ತು. ಅದರಿಂದ ರಚ್ಚು ಎಷ್ಟೋ ಬಾರಿ ತಪ್ಪಿಸಿಕೊಂಡಿದ್ದು ಇದೆ. ಕೊನೆಗೂ ತಾನು ಹಸೆಮಣೆ ಏರಲು ರೆಡಿ ಎಂದಿದ್ದೇ ತಡ ಅಧಿಕೃತ ಪ್ರಪೋಸಲ್ಗಳ ಸುರುಮಳೆಯೇ ಸುರಿದಿದ್ಯಂತೆ. ಒಟ್ಟಾರೆ ಡಿಂಪಲ್ ಕ್ವೀನ್ ಅಭಿಮಾನಿಗಳು ಫುಲ್ ಖುಷಿಯಾಗಿರೋದಂತೂಈ ಸತ್ಯ. ಅಂತೂ ಇಂತೂ ರಚಿತಾರಾಂ ಮದುವೆಯಾಗಲು ಒಪ್ಪಿದ್ದಾಯ್ತು. ಹುಡುಗನನ್ನು ಹುಡುಕಲು ಇನ್ಯಾಕೆ ತಡ……
Comments