ಪ್ರೀತಿಯ ಮಡದಿ ರಾಧಿಕಾ ಆಸೆಗೆ ತಣ್ಣೀರೆರಚಿದ್ಯಾಕೆ ರಾಕಿ ಬಾಯ್…!!!

02 Jan 2019 4:14 PM | Entertainment
381 Report

ಹೌದು.. ನಟಿ ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾವನ್ನು ನೋಡಿಲ್ಲ. ಈ ಬಗ್ಗೆ ಯಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಓರಾಯನ್ ಮಾಲ್‍ ನಲ್ಲಿ ಅಭಿಮಾನಿಗಳ ಜೊತೆ ಕೆಜಿಎಫ್ ನೋಡಿದ ಯಶ್, ರಾಧಿಕಾ ಪಂಡಿತ್ ಇನ್ನೂ ಸಿನಿಮಾ ನೋಡಿಲ್ಲಾ ಎಂದು ಹೇಳಿದ್ದಾರೆ. ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ. ನಾನು ಸಿನಿಮಾ ನೋಡಲೇಬೇಕು ಎಂದು ಪ್ರತಿದಿನ ರಾಧಿಕಾ ಕೇಳುತ್ತಿದ್ದಾರೆ. ಆದರೆ ರಾಧಿಕಾ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಯಾಕೆಂದರೆ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಧಿಕಾ ಸಿನಿಮಾ ನೋಡಲು ಆಗುವುದಿಲ್ಲ ಎಂದು ಯಶ್ ಅಭಿಮಾನಿಗಳ ಬಳಿ ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ನಂ.1 ಸ್ಟಾರ್ ಆಗಿದ್ದಾರೆ. ವಾರದ ಹಿಂದಷ್ಟೇ ಸಿನಿಮಾ ಕೆಜಿಎಫ್ ರಿಲೀಸ್ ಆಗಿ ಐದು ಭಾಷೆಗಳಲ್ಲಿ ಭರ್ಜರಿ ಬ್ಯಾಟ್  ಬೀಸಿದ್ದಾರೆ, ಸಿನಿಮಾ ನೋಡಿದವರೂ ವಾರೆ ವ್ಹಾ ಅಂತಿದ್ದಾರೆ. ಯಶ್ ಸ್ಟೈಲ್ ಗೆ ಬೆನ್ನು ತಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಎರಡು ವಾರ ಆಗುತ್ತ ಬಂದಿದ್ದರೂಇಂದಿಗೂ ಸಹ ಥಿಯೇಟರ್ ಗೆ ಲಗ್ಗೆ ಇಡುತ್ತಿದ್ದಾರೆ. ಆದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ಕೆಜೆಎಫ್ ಸಿನಿಮಾವನ್ನು ನೋಡಿಲ್ಲ. ರಾಧಿಕಾ ಪಂಡಿತ್ ಡಿಸೆಂಬರ್ 2 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಡಬಲ್ ಡಬಲ್  ಖುಷಿಯಲ್ಲಿರುವ ಯಶ್ಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯಶ್ ಸಿನಿಮಾ ಮೇಕಿಂಗ್ ಅನ್ನು ಬಾಯಿ ತುಂಬಾ ಹೊಗಳಿ ಕೊಂಡಾಡಿದ್ದಾರೆ. ಇನ್ನು ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಗೆ  ಕೆಜಿಎಫ್ ಸಿನಿಮಾ ನೋಡುವ ಬರದಲ್ಲಿದ್ದಾರೆ. ಆದರೆ ರಾಧಿಕಾ ಈಗಿರುವ ಕಂಡೀಷನ್ ನಲ್ಲಿ ಥಿಯೇಟರ್ ಕಡೆ ಹೋಗುವ ಹಾಗಿಲ್ಲ.ಅವರು ಸುಧಾರಿಸುವ ತನಕ ಕಾಯಬೇಕಿದೆ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

Edited By

Manjula M

Reported By

Manjula M

Comments