ಅಂದು ಶೃತಿ ಪರ ನಿಂತ ನಟಿ ರೂಪಾ, ಇಂದು ಹೇಳಿದ್ದೇನು…???
ಮೀಟೂ ಬಿಸಿ ಇನ್ನು ತಣ್ಣಗಾಗಿಲ್ಲ. ಹಾಲಿವುಡ್ ನಿಂದಿಡಿದೂ ಬಾಲಿವುಡ್ ಅಷ್ಟೇ ಅಲ್ಲಾ,,,,,ಸ್ಯಾಂಡಲ್ ವುಡ್ನಲ್ಲಿ ಭಾರೀ ಮಟ್ಟದ ಬಿರುಗಾಳಿಯನ್ನೆ ಎಬ್ಬಿಸಿತು. ಕೊನೆಗೆ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶೃತಿ ಹರಿಹರನ್ ದೊಡ್ಡಮಟ್ಟದಲ್ಲಿ ಆರೋಪ ಮಾಡಿದ್ರು. ಇನ್ನೂ ಅದು ವಿಚಾರಣೆ ಹಂತದಲ್ಲಿದೆ. ತಣ್ಣಗಾಗಿದ್ದ #MeToo ಬಿರುಗಾಳಿ ಮತ್ತೆ ಬೀಸಲಾರಂಭಿಸಿದೆ. ಈ ಹಿಂದೆ ಶ್ರುತಿ ಹರಿಹರನ್ ಅವರಿಗೆ ಬೆಂಬಲವಾಗಿ ನಿಂತಿದ್ದ ನಟಿ ನಿರ್ದೇಶಕಿ ರೂಪ ಐಯ್ಯರ್ ಮತ್ತೆ ಈ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ. ಇನ್ನು ಬಿಸಿ ಆರುವ ಮುನ್ನವೇ ಒಬ್ಬರಾದಂತೇ ಒಬ್ಬರು ಮೀಟೂ ಬಗ್ಗೆ ಮಾತನಾಡುತ್ತಿದ್ದಾರೆ. ಅಂದ ಹಾಗೇ ರೂಪ ಅಯ್ಯರ್ ಅವರು......
'ಶ್ರುತಿ ವಿಚಾರದಲ್ಲಿ ನಾವು ಯಾರು ಅಲ್ಲಿರಲಿಲ್ಲ. ಏನಾಗಿತ್ತು ಎಂದು ಗೊತ್ತಿಲ್ಲ. ಆದರೂ.ಆದ್ರು ನಾನು ಅವರಿಗೆ ಬೆಂಬಲಿಸಿದ್ದೇನೆ. ಆದರೆ ಅವರು ಸಾಕ್ಷಿ ನೀಡುವ ವಿಷಯದಲ್ಲಿ ಹಿಂದೆ ಸರಿದರು. ಇದರಿಂದಾಗಿ ಒಂದಿಷ್ಟು ಮಂದಿ ಅವರಿಗೆ ಬೆಂಬಲ ಮಾಡಲಿಲ್ಲ. ಹೀಗಾಗಿ ನಾನು ಕೂಡ ಹಿಂದೆ ಬಂದೆ . ಆ ವಿಷಯ ಈಗ ಇನ್ನು ಕೋರ್ಟುನಲ್ಲಿದೆ.#MeToo ಕುರಿತಂತೆ ನಟಿ ಸುಮನ್ ನಗರ್ಕರ್ ಸಹ ತಮ್ಮ ಮೌನ ಮುರಿದ್ದಿದ್ದಾರೆ. 'ಈ ಅಭಿಯಾನ ಒಂದು ಒಳ್ಳೆಯ ಬೆಳವಣಿಗೆ ನಾನು ಸಿನಿಮಾ ರಂಗದಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದೇನೆ. ಆದರೆ ಆ ರೀತಿಯ ಅನುಭವ ನನಗೆ ಆಗಿರಲಿಲ್ಲ. ಕೆಲವೊಂದಷ್ಟು ನಟಿಯರು ಆರೋಪ ಮಾಡುತ್ತಿದ್ದಾರೆ ಅವರಿಗೆ ಯಾರು ಬೆಂಬಲಿಸುತ್ತಿಲ್ಲ. ಆದರೆ ಹಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಇದಕ್ಕೆ ತುಂಬಾ ಬೆಂಬಲ ಸಿಗುತ್ತಿದ್ದು, ನಮ್ಮಲ್ಲೂ ಈ ಕೆಲಸ ಆಗಬೇಕಿದೆ' ಎಂದಿದ್ದಾರೆ ಸುಮನ್. ರೂಪ ಅಯ್ಯರ್ ಅವರು '#MeToo ಅಭಿಯಾನ ತುಂಬ ದುರ್ಬಳಕೆಯಾಗುತ್ತಿದೆ.
ಯಾವತ್ತೋ ಆಗಿದನ್ನ ಈಗ ಹೇಳಲಾಗುತ್ತಿದೆ. ಬಾಲಿವುಡ್ ಅನ್ನೊದು ದೊಡ್ಡ ಸಾಗರ. ಅಲ್ಲಿ ಯಾರು ಏನನ್ನ ಬೇಕಿದ್ದರೂ ಮಾಡಬಹುದು ಹಾಗೂ ಆರೋಪಿಸಬಹುದು. ಆದರೆ ಚಂದನವನದಲ್ಲಿ ಹಾಗೆ ಅಲ್ಲ, ಇದು ಕುಟುಂಬವಿದ್ದಂತೆ. ಹಿರಿಯ ಮತ್ತು ಖ್ಯಾತ ನಟರ ಬಗ್ಗೆ ಆರೋಪ ಬಂದಾಗ ಅದನ್ನ ತಡೆಯುವ ಪ್ರಯತ್ನ ಮಾಡಲಾಗುತ್ತದೆ. ತಂದೆ ತಾಯಿ ಕೂಡ ಹೆಣ್ಣು ಮಕ್ಕಳನ್ನ ಮುಂದೆ ಬಂದು ಹೇಳೋದಕ್ಕೆ ಬಿಡುವುದಿಲ್ಲ. ಮೀಟೂ ವಿಚಾರ ಸಾಕಷ್ಟು ಮಂದಿಯನ್ನು ತಲೆಕೆಡಿಸಿಕೊಂಡಿದೆ. ಇನ್ನೂ ಮೀಟೂ ಒಂದು ಕಡೆ ಸದ್ಬಳಕೆ ಆಗುತ್ತಿದ್ದರೇ, ಮತ್ತೊಂದು ಕಡೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ ರೂಪ.
Comments