ತಿಮ್ಮಪ್ಪನ ದರ್ಶನ ಪಡೆದ ಕಿಚ್ಚ..!! ಕಾರಣ ಏನ್ ಗೊತ್ತಾ..?
ಹೊಸ ವರ್ಷದ ಆರಂಭಕ್ಕೆ ಮೊದಲು ಕಿಚ್ಚ ಸುದೀಪ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಆಶಿರ್ವಾದ ಪಡೆದುಕೊಂಡಿದ್ದಾರೆ. ಈ ತಿಂಗಳು ಕಿಚ್ಚನ ಕಡೆಯಿಂದ ಮತ್ತೊಂದು ಸುದ್ದಿ ಬರಲಿದೆ…ಹೊಸ ವರ್ಷಕ್ಕೆ ಟ್ವಿಟರ್ ನಲ್ಲಿ ಶುಭ ಕೋರಿರುವ ಸುದೀಪ್ ಮತ್ತೊಂದು ವಿಶೇಷವನ್ನು ತಿಳಿಸಿದ್ದಾರೆ. ಇದೇ ತಿಂಗಳು 31 ಕ್ಕೆ ತಾವು ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷವಾಯಿತು ಎಂಬ ಸಂಗತಿಯನ್ನು ಕಿಚ್ಚ ತಿಳಿಸಿದ್ದಾರೆ… ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ..
ಇದರ ಮೂಲಕ ತಮಗೆ ಬೆಂಬಲ ನೀಡಿದ ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ನೀವು ನನಗೆ ಇಷ್ಟು ದಿನ ನೀಡಿದ ಬೆಂಬಲದಿಂದಲೇ ಈ ಯಶಸ್ಸಿನ ಹಾದಿ ಸಾಧ್ಯವಾಗಿದೆ ಎಂದು ಸುದೀಪ್ ಎಲ್ಲರನ್ನೂ ಸ್ಮರಿಸಿಕೊಂಡಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದ್ದು. ಸ್ಪರ್ಶ ಸಿನಿಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸುದೀಪ್ ಭರವಸೆಯ ನಾಯಕ ಅನ್ನೋದನ್ನ ಸಾಭೀತು ಪಡಿಸಿದರು.. ಅದರ ಬೆನ್ನಲೆ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನೀಡಿದರು. ಸುದೀಪ್ ತನ್ನದೆ ಅಭಿಮಾನಿಗಳ ಬಳಗವನ್ನೆ ಕಟ್ಟಿಕೊಂಡಿದ್ದಾರೆ..
Comments