ಟ್ವಿಟರ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ..!!

ಸ್ಯಾಂಡಲ್ ವುಡ್ ನಲ್ಲಿ 2018 ರಲ್ಲಿ ಸಾಕಷ್ಟು ಘಟನೆಗಳು ನಡೆದಿವೆ.. ಕೆಲವೊಂದು ಒಳ್ಳೆಯ ವಿಷಯಗಳಾದರೆ ಮತ್ತೆ ಕೆಲವೊಂದು ಮನಸ್ಸಿಗೆ ಬೇಜಾರಾಗುವಂತದ್ದು .. ಅದರಲ್ಲಿ 2018 ರಲ್ಲಿ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ಸುದ್ದಿಗಳಲ್ಲಿ ಒಂದು ಎಂದರೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಲವ್ ಬ್ರೇಕ್ ಅಪ್ ಆಗಿದ್ದು.ಆದರೆ ಈ ವರ್ಷದ ಕೊನೆಯ ದಿನ ರಶ್ಮಿಕಾ ಮತ್ತೆ ತಮ್ಮ ಕಿರಿಕ್ ಪಾರ್ಟಿ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಸೇರಿದಂತೆ ಕಿರಿಕ್ ಪಾರ್ಟಿ ತಂಡ ಮತ್ತು ತಾವು ಇದುವರೆಗೆ ನಟಿಸಿದ ಚಿತ್ರಗಳ ಸ್ಟಾರ್ ಗಳ ಜತೆಗಿನ ಸುಂದರ ಕ್ಷಣಗಳ ಫೋಟೋವನ್ನು ಪ್ರಕಟಿಸಿ ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿಗೆ ಬಂದು ಎರಡು ವರ್ಷವಾದ ಗಳಿಗೆಯಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಸಲ್ಲಿಸಿರುವ ರಶ್ಮಿಕಾ ಕಿರಿಕ್ ಪಾರ್ಟಿಗೆ ವಿಶೇಷ ಧನ್ಯವಾದವನ್ನು ತಿಳಿಸಿದ್ದಾರೆ.. ರಕ್ಷಿತ್ ಶೆಟ್ಟಿ ಜೊತೆಯಿರುವ ಫೋಟೋಕ್ಕೆ ಅಭಿಮಾನಿಗಳು ವಿಶೇಷವಾಗಿಯೇ ಧನ್ಯವಾದವನ್ನು ತಿಳಿಸಿದ್ದಾರೆ.. ಅಭಿಮಾನಿಗಳು ಮತ್ತೆ ಈ ಜೋಡಿ ಒಂದಾಗಲಿ ಎಂದು ಬಯಸುತ್ತಿರುವುದು ಸುಳ್ಳಲ್ಲ.. ಕರ್ಣ ಹಾಗೂ ಸಾನ್ವಿಯ ಜೋಡಿಯನ್ನು ಇಡೀ ಸಿನಿ ರಸಿಕರೆ ಒಪ್ಪಿಕೊಂಡಿದ್ದರು.. ಆದರೆ ಆ ಜೋಡಿ ಮೇಲೆ ಯಾರ ದೃಷ್ಟಿ ಬಿತ್ತೊ ಗೊತ್ತಿಲ್ಲ… ಇದೀಗ ಅವರ ಜೋಡಿ ಬೇರೆ ಬೇರೆಯಾಗಿದೆ.. ಮತ್ತೆ ಆ ಜೋಡಿ ಒಂದಾಗಲಿ ಅನ್ನೊದು ಅಭಿಮಾನಿಗಳ ಆಶಯ..!
Comments