ಬಾರದ ಲೋಕಕ್ಕೆ ಪಯಣ ಬೆಳಸಿದ ಹಿರಿಯ ನಟ ಸಿ .ಹೆಚ್. ಲೋಕನಾಥ್

ಸ್ಯಾಂಡಲ್’ವುಡ್ ನಲ್ಲಿ ಈ ವರ್ಷದಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳಾದರೆ ಮತ್ತೊಂದಿಷ್ಟು ಬೇಸರವಾಗುವ ಸಂಗತಿಗಳು ನಡೆದಿವೆ… ಈ ವರ್ಷದಲ್ಲಿ ಕೆಲವರು ಸಪ್ತಪದಿ ತುಳಿದು ನವ ದಾಂಪತ್ಯಕ್ಕೆ ಕಾಲಿಟ್ಟರು.. ಮತ್ತೆ ಕೆಲವರು ತಮ್ಮ ತಮ್ಮ ಮನೆಗೆ ಹೊಸ ಅಥಿತಿಯ ಆಗಮನ ಮಾಡಿಕೊಂಡರು.. ಆದರೆ ಮತ್ತೆ ಕೆಲವರು ಇಡೀ ಚಿತ್ರರಂಗವನ್ನೆ ಬರಿದು ಮಾಡಿ ತಮ್ಮ ನೆನಪುಗಳನ್ನು ಬಿಟ್ಟು ಮರಳಿ ಬಾರದ ಲೋಕಕ್ಕೆ ಪಯಣ ಬೆಳಸಿದರು.. ಇತ್ತಿಚಿಗಷ್ಟೆ ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಅಗಲಿದರು.. ಇದೀಗ ಹಿರಿಯ ಕಲಾವಿದರಾದ ಸಿಎಚ್ ಲೋಕನಾಥ್ ನಮ್ಮನ್ನಗಲಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಹೆಚ್. ಲೋಕನಾಥ್ (90) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಂಗಭೂಮಿ ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲೋಕನಾಥ್ ಅವರು ನಿನ್ನೆ ರಾತ್ರಿ 12.15 ಕ್ಕೆ ಕೊನೆ ಉಸಿರೆಳೆದಿದ್ದಾರೆ. ರಂಗಭೂಮಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಲೋಕನಾಥ್, ಸುಮಾರು 650 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಮಧ್ಯಾಹ್ನ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ತಿಳಿದು ಬಂದಿದೆ.
Comments