ನಾನೇನೇ ಆಗಿದ್ದರೂ ಅದಕ್ಕೆ ಕನ್ನಡಿಗರ ಪ್ರೀತಿಯೇ ಕಾರಣ..!! ರಾಕಿಂಗ್ ಸ್ಟಾರ್’ನ ರಾಕಿಂಗ್ ಮಾತು..!!!

ಎಲ್ಲಡೆ ಭಾರೀ ನಿರೀಕ್ಷೆ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರವು ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಮತ್ತು ಭರ್ಜರಿ ಪ್ರದರ್ಶನ ಕಾಣುತ್ತಿದೆ.ಕೆಜಿಎಫ್ ಚಿತ್ರ ಬಿಡುಗಡೆಯಾದ ನಂತರ ಯಶ್ ಶುಕ್ರವಾರ ಸಂಜೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚಿತ್ರತಂಡದ ಜೊತೆ ಒರಾಯನ್ ಮಾಲ್ ನಲ್ಲಿ ಸಿನಿಮಾವನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಬೇರೆ ಭಾಷೆಗೆ ಹೋಗುವುದಿಲ್ಲ. ನನಗೆ ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ. ಇಂದು ನಾನೇನೇ ಆಗಿದ್ದರೂ ಅದಕ್ಕೆ ಕನ್ನಡಿಗರ ಪ್ರೀತಿ, ಅಭಿಮಾನವೇ ಕಾರಣ ಎಂದು ಹೇಳಿದರು.
ಕೆಜಿಎಫ್ ಚಿತ್ರ ಬಿಡುಗಡೆಯಾದ ಐದು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲೂ ದಾಖಲೆ ನಿರ್ಮಿಸಿದೆ. ಹಾಗಾಗಿ ಚಿತ್ರತಂಡ ಚಿತ್ರಕ್ಕೆ ಮತ್ತಷ್ಟು ಅಡ್ವಾನ್ಸ್ ಸೌಂಡ್ ಎಫೆಕ್ಟ್ ಅಳವಡಿಸಿದ್ದು, ಚಿತ್ರ ಮತ್ತಷ್ಟು ರಿಚ್ ಆಗಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ವಲ್ಲದೇ ಇಡೀ ದೇಶದ ಸಿನಿ ಕ್ಷೇತ್ರದಲ್ಲಿ ಸೆನ್ಸೇಶನ್ ಕ್ರಿಯೆಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಕೆಜಿಎಫ್' ಚಿತ್ರ ಹೊಸ ದಾಖಲೆಗಳನ್ನು ಮತ್ತೊಮ್ಮೆ ಬರೆಯುತ್ತಲೇ ಇದೆ.ಈಗ ಡಿಜಿಟಲ್ ರೈಟ್ಸ್ ವಿಚಾರದಲ್ಲಿ ಮತ್ತೊಂದು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಕನ್ನಡ ಚಿತ್ರ ರಂಗದಲ್ಲಿಯೇ ಅತಿ ಗರಿಷ್ಠ ಮೊತ್ತವನ್ನು ಡಿಜಿಟಲ್ ಹಕ್ಕು ಮಾರಾಟದಿಂದ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
Comments