ದುನಿಯಾ ವಿಜಯ್ ವಿರುದ್ಧ ಗರಂ ಆದ ರಾಜ್ಯ ಮಹಿಳಾ ಆಯೋಗ..!!
ರಾಜ್ಯ ಮಹಿಳಾ ಆಯೋಗ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ವಿರುದ್ಧ ಗರಂ ಆಗಿದೆ ಎಂದು ಹೇಳಲಾಗುತ್ತಿದೆ..ನೋಟಿಸ್ ನೀಡಿದ್ದರೂ ಕೂಡ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿಸಲಾಗುತ್ತಿದೆ.ಜೀವನ ನಡೆಸಲು ನನಗೆ ವಿಜಯ್ ಹಣ ನೀಡುತ್ತಿಲ್ಲ. ಮಕ್ಕಳೊಂದಿಗೆ ಜೀವನ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆ ಎಂದು ವಿಜಿ ವಿರುದ್ಧ ಮೊದಲ ಪತ್ನಿ ನಾಗರತ್ನ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಆಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿ. 17 ರಂದು ವಿಚಾರಣೆಗೆ ಹಾಜರಾಗುವಂತೆ ವಿಜಿಗೆ ನೋಟಿಸ್ ನೀಡಿತ್ತು.
ಆದರೆ ದುನಿಯಾ ವಿಜಿಯ್ ಶೂಟಿಂಗ್ ಇದ್ದ ಕಾರಣ ಒಂದು ವಾರ ಕಾಲವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಯೋಗ ಅದಕ್ಕೆ ಅನುವು ಕೂಡ ಮಾಡಿಕೊಟ್ಟಿತ್ತು. ಆದರೆ ಇದೀಗ ದುನಿಯಾ ವಿಜಯ್ ಒಂದು ವಾರ ಆದರೂ ಕೂಡ ವಿಚಾರಣೆಗೆ ಹಾಜರಾಗದೇ ಇದ್ದಿದ್ದರಿಂದ ವಿಜಿ ವಿರುದ್ಧ ಆಯೋಗ ಗರಂ ಆಗಿದೆ.ಇನ್ನೊಂದು ವಾರದೊಳಗೆ ವಿಚಾರಣೆಗೆ ಹಾಜರಾಗಿ ಎಂದು ಮಹಿಳಾ ಆಯೋಗ ದುನಿಯಾ ವಿಜಿಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
Comments