ಕೆಜಿಎಫ್ ನೋಡಲು ನಟಿ ಅಮೂಲ್ಯ ಬುಕ್ ಮಾಡಿದ್ದು ಎಷ್ಟು ಟಿಕೇಟ್ ಗೊತ್ತಾ..?

ಚಂದನವನದಲ್ಲಿ ಬಹು ನಿರೀಕ್ಷಿತವಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಕನ್ನಡ, ಹಿಂದಿ,ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ 'ಕೆಜಿಎಫ್' 5 ದಿನದಲ್ಲಿ ಸುಮಾರು 75 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸದ್ಯಕ್ಕೆ ಇದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಸಿನಿಮಾವನ್ನು ಮಾಡಬಹುದು ಎಂದು ಪ್ರಶಾಂತ್ ನೀಲ್ ತೋರಿಸಿಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾ ಈಗ ಎಲ್ಲೆಡೆ ಹವಾ ಎಬ್ಬಿಸುತ್ತಿದೆ. ಚಿತ್ರಮಂದಿರಗಳೂ ಭರ್ತಿಯಾಗಿವೆ.
ಇದರ ನಡುವೆ ನಟಿ ಅಮೂಲ್ಯ ಕೆಜಿಎಫ್ ನೋಡಿದ್ದಾರೆ. ಆದರೆ ಅದಕ್ಕಾಗಿ ಅವರು ಸುಮಾರು 25 ಟಿಕೆಟ್ ಖರೀದಿಸಿ ತಮ್ಮ ಇಡೀ ಕುಟುಂಬದವರನ್ನೂ ಜೊತೆಗೆ ಕರೆದೊಯ್ದು ಸಿನಿಮಾ ನೋಡಿದ್ದಾರಂತೆ. ಹಾಗಂತ ಅವರೇ ತಿಳಿಸಿದ್ದಾರೆ.. ಬೆಂಗಳೂರಿನ ಪಿವಿಆರ್ ಒರಿಯಾನ್ ಮಾಲ್ ನಲ್ಲಿ ಅಮೂಲ್ಯ ಕುಟುಂಬ ಸಮೇತ ಕೆಜಿಎಫ್ ನೋಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅಮೂಲ್ಯ ಇದೇ ಮೊದಲ ಬಾರಿಗೆ ನನ್ನ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದೇನೆ. ರಾಕಿ ಬಾಯ್ ಪ್ರತೀ ಫ್ರೇಮ್ ನಲ್ಲೂ ಕೂಡ ರಾಕಿಂಗ್ ಆಗಿ ಕಾಣಿಸುತ್ತಿದ್ದಾರೆ..ಕನ್ನಡ ಸಿನಿಮಾವನ್ನು ಮತ್ತೊಂದು ಲೆವೆಲ್ ಗೆ ಎತ್ತಿದ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಅಮೂಲ್ಯ ಶುಭಾಷಯ ತಿಳಿಸಿದ್ದಾರೆ.
Comments