ಕೆಜಿಎಫ್ ಡಿಜಿಟಲ್ ರೈಟ್ಸ್ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ..?

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ವಲ್ಲದೇ ಇಡೀ ದೇಶದ ಸಿನಿ ಕ್ಷೇತ್ರದಲ್ಲಿ ಸೆನ್ಸೇಶನ್ ಕ್ರಿಯೆಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಕೆಜಿಎಫ್' ಚಿತ್ರ ಹೊಸ ದಾಖಲೆಗಳನ್ನು ಮತ್ತೊಮ್ಮೆ ಬರೆಯುತ್ತಲೇ ಇದೆ.ಈಗ ಡಿಜಿಟಲ್ ರೈಟ್ಸ್ ವಿಚಾರದಲ್ಲಿ ಮತ್ತೊಂದು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಕನ್ನಡ ಚಿತ್ರ ರಂಗದಲ್ಲಿಯೇ ಅತಿ ಗರಿಷ್ಠ ಮೊತ್ತವನ್ನು ಡಿಜಿಟಲ್ ಹಕ್ಕು ಮಾರಾಟದಿಂದ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಇದೀಗ ಹದಿನೆಂಟು ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಯಾವುದೇ ಅಧಿಕೃತ ವರದಿ ಇದುವರೆಗೂ ಕೂಡ ಬಂದಿಲ್ಲ. ಹದಿನೆಂಟು ಕೋಟಿ ರೂ. ಕೆಜಿಎಫ್ ಪಾರ್ಟ್ ಒಂದು ಮತ್ತು ಪಾರ್ಟ್ ಎರಡು ಸೇರಿದೆಯೇ ಎಂಬುದು ಮಾತ್ರ ತಿಳಿದುಬಂದಿಲ್ಲ.. . ಆದರೆ ಈ ಮೂಲಕ ಚಿತ್ರವೊಂದು ಹೆಚ್ಚಿನ ಹಣ ಗಳಿಸಬಹುದು ಎಂಬುದನ್ನು ಕೆಜಿಎಫ್ ತಿಳಿಸಿಕೊಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಹೊಸ ಬೆಳವಣಿಗೆಯಾಗಿ ಕಾಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
Comments